Sunday, October 26, 2008

ಮೊದಲ ಮಾತು ...

ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.
ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ. ಈ ಉತ್ತಮ ಕೊಡುಗೆ ಎಂದರೆ "ನಿಸ್ವಾರ್ಥ ಸೇವೆ". ನಿಸ್ವಾರ್ಥ ಸೇವೆಯ ಮೂಲಕ "ಗ್ರಾಮೀಣಾಭಿವ್ರುದ್ದಿ ". ಅದರ ಮೂಲಕ "ಭಾರತದ ಅಭಿವೃದ್ದಿ". ಅದರೊಟ್ಟಿಗೆ ಸಮಾಜದ ಸರ್ವತೋಮುಖ ಬೆಳವಣಿಗೆ ನಮ್ಮ ಧ್ಯೇಯ.

ಇದು ಶ್ರೀಮಂತರ, ಸಮಯಸಾಧಕರ, ಮತೀಯವಾದಿಗಳ, ಸ್ವಾರ್ಥ ಸಾಧಕರ ಸಂಸ್ಥೆಯಲ್ಲ. ಬದಲಾಗಿ ಬದುಕಿನ ಕಷ್ಟಗಳನ್ನೆದುರಿಸಿ , ಸಾಧನೆಯ ಕನಸು ಹೊತ್ತು, ಸಾಗಿ, ಅಲ್ಪಮಟ್ಟಿನ ಯಶಸ್ಸು ಕಂಡು, ಇನ್ನೂ ಸಾಧಿಸಬೇಕೆನ್ನುವ ಉತ್ಸಾಹದ ಒಯಸ್ಸಿಸ್ಸನ್ನಿರಿಸಿಕೊಂಡಿರುವ "ಮಧ್ಯಮ ವರ್ಗದ ಯುವ ಚೇತನಗಳ ಕನಸಿನ ಕೂಸು". ಇಲ್ಲಿರುವುದು ಅಮಿತ ಉತ್ಸಾಹ, ಅಸಾಧಾರಣ ಜ್ಞಾನ ಸಂಪತ್ತು, ಬದುಕು ಸವೆಸಲು ಕಷ್ಟವಾದ ಮಂದಿಗೆ ಒಂದಸ್ಟು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ. ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.

"ಚುಕ್ಕಿ ಸಂಸ್ಥೆ " , ಸುಂದರ ಬದುಕು ಕಟ್ಟಿ ಕೊಳ್ಳಲು ನಿಜವಾದ ಗೆಳೆಯ.

Tuesday, October 21, 2008

ಬೆಳಗಿಸೋಣ ಚುಕ್ಕಿಯ.....

ನಮಸ್ತೆ ಬಂಧುಗಳೇ,
"ಗ್ರಾಮೀಣಾ ಭಿವ್ರುದ್ದಿ ಯ ಮೂಲಕ ನವ ಭಾರತ ನಿರ್ಮಾಣ" da ಕನಸು ಹೊತ್ತುಕೊಂಡು ಹುಟ್ಟಿ ಕೊಂಡಿರೋ ಸಮಾನ ಮನಸ್ಕ ಯುವ ಮನಸ್ಸುಗಳ ಸಮಾಜಮುಖಿ ಸೇವಾ ಸಂಸ್ಥೆ "ಚುಕ್ಕಿ". ಅದಮ್ಯ ಕನಸುಗಾರ ಲಿಂಗೆಶ್ ಹುಣಸೂರ್ ಈ ಸಂಸ್ಥೆಯ ಸಂಸ್ಥಾಪಕರು. "ಸೇವೆ, ಶಿಕ್ಷಣ, ಜಾಗೃತಿ, ಅಭಿವೃದ್ದಿ " ಈ ಸಂಸ್ಥೆಯ ಮೂಲ ಮಂತ್ರಗಳು.

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......