Showing posts with label ಉದ್ಯೋಗ ಮಾಹಿತಿ. Show all posts
Showing posts with label ಉದ್ಯೋಗ ಮಾಹಿತಿ. Show all posts

Thursday, May 30, 2013

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಯ ಉದ್ಯೋಗವಕಾಶ.

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಯ ಉದ್ಯೋಗವಕಾಶ.

ಗಣಿತ,ಅರ್ಥಶಾಸ್ತ್ರ, ಆಂಗ್ಲಭಾಷೆ, ವಾಣಿಜ್ಯ ವಿಷಯಗಳನ್ನು ಬೊಧಿಸಲು.

ವಿವರಗಳಿಗೆ ಸಂಪರ್ಕಿಸಿ:

ಶ್ರೀ.ರೋಹಿತ್ ಕುಮಾರ್,
ಪ್ರಾಂಶುಪಾಲರು,
ಬ್ರೈಟ್ ವೇ ಪಿ.ಯು. ಕಾಲೇಜ್,
ನಂ:105, 12 ನೇ ಮೈನ್,
ಬಿ.ಹೆಚ್.ಸಿ.ಎಸ್ ಲೇ ಔಟ್ ನ ಎದುರು,
ಗೌಡನಪಾಲ್ಯ ದ ಹತ್ತಿರ,
ಸುಬ್ರಮಣ್ಯಪುರ ಅಂಚೆ,
ಉತ್ತರಹಳ್ಳಿ ಹೊಬಳಿ,
ಬೆಂಗಳೂರು-೫೬೦೦೬೧

ಸಂಪರ್ಕಕ್ಕೆ ದೂರವಾಣಿ: 2665388

ಸುಮಾರು  ಹದಿಮೂರು ಸಾವಿರದವರೆಗೆ ಸಂಬಳ ನೀಡಬಹುದು. ಈ ಅವಕಾಶವನ್ನು ನಿರುದ್ಯೋಗ ಸ್ನಾತಕೋತ್ತರ ಪದವಿಧರರು ಸದುಪಯೋಗ ಪಡಿಸಿಕೊಳ್ಳಿ.

Monday, July 9, 2012

ಉದ್ಯೋಗ ಮೇಳ

ಜುಲೈ 14, 15 ರಂದು ಚಿಕ್ಕಬಳ್ಳಾಪುರದ ಎಸ್. ಜೆ.ಸಿ. ತಾಂತ್ರಿಕ ವಿದ್ಯಾಲಯದಲ್ಲಿ 2012 ನೆ ಸಾಲಿನ ಉದ್ಯೋಗ ಮೇಳ ನಡೆಯಲಿದೆ. ದೇಶ-ವಿದೇಶಗಳ ಒಟ್ಟು 126 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಪಾಲ್ಗೋಳ್ಳಲಿವೆ. ಉದ್ಯೋಗಾಕಾಂಕ್ಷಿಗಳಿಗೆ ನೋಂದಣಿ ಉಚಿತ. ವಿವರಗಳಿಗೆ http://www.udyogamela.com ನೋಡಿ, ತಮ್ಮ ವಿಧ್ಯಾರ್ಹತೆ, ಮತ್ತಿತ್ತರ ವಿವರ ನೋಂದಾಯಿಸಿಕೋಳ್ಳಬಹುದು. ಅಭ್ಯರ್ಥಿಗಳು ಒದಗಿಸುವ ಮಾಹಿತಿಯನ್ನು ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳಿಗೆ ನೀಡಲಾಗುವುದು. 126 ಕಂಪನಿಗಳು ಭಾಗವಹಿಸುವ ಖಚಿತತೆ ಇದೆ. ಆನ್ ಲೈನ್ ಮೂಲಕ ನೋಂದಣಿ ಮಾಡದಿದ್ದರೂ , ಮೇಳದಲ್ಲಿ ಪಾಲ್ಗೋಳ್ಲಬಹುದು. ಸ್ಥಳದಲ್ಲೇ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.


(ಮಾಹಿತಿ: ಪ್ರಜಾವಾಣಿ ದಿನಪತ್ರಿಕೆ, ದಿನಾಂಕ 09/07/2012 ಪುಟ 02)

Saturday, February 4, 2012

KANNADASPARDAYODHARU

ಡಿಯರ್ ಪ್ರೆಂಡ್ಸ್ ಅಂಡ್ ಹಿತೈಷಿಗಳೇ, 

ನಿಮಗೆಲ್ಲರಿಗೂ ನಿಮ್ಮ ಚುಕ್ಕಿ ಸಂಸ್ಥೆಯ ಸ್ನೇಹಪೂರ್ವಕ ನಮನಗಳು.



ಅಂತರ್ಜಾಲದಲ್ಲಿ ಹಲವಾರು ಬಗೆಯ ವಸ್ತು ವಿಷಯಗಳ, ವಿಭಿನ್ನ ದೃಷ್ಟಿ ಕೋನಗಳ ಹಲವಾರು   ಕನ್ನಡ ಭಾಷೆಯ  ತಾಣಗಳಿರುವುದು ನಿಜಕ್ಕೂ ಸಂತಸದ, ಕನ್ನಡ ಸ್ವಾಭಿಮಾನದ, ಹೆಮ್ಮಯ ವಿಷಯ.  ಈ ನಿಟ್ಟಿನಲ್ಲಿ ಹಲವಾರು  ಕನ್ನಡ ಮನಸ್ಸುಗಳು ಕನ್ನಡಿಗರನ್ನು ಬೆಸೆಯಲು, ಕನ್ನಡವನ್ನು ಪಸರಿಸಲು ಬಹಳಷ್ಟು ಶ್ರಮಪಡುತ್ತಿದ್ದಾರೆ. 

ಆದರೆ ಅಂತರ್ಜಾಲದಲ್ಲಿ,  ನಾಗರಿಕ ಸೇವಾ ಪರೀಕ್ಷೆಗಳನ್ನು( CIVIL SERVICE EXAMS - KPSC/UPSE/ETC.,) ತೆಗೆದುಕೊಳ್ಳುವವರಿಗೆ ಮಾಹಿತಿ/ಮಾರ್ಗದರ್ಶನ /ಅಧ್ಯಯನ  ಸಾಮಾಗ್ರಿ /ಆಪ್ತ ಸಮಾಲೋಚನೆ ಗಾಗಿ ನಿರ್ದಿಸ್ಟ ಕನ್ನಡ ವೆಬ್ ತಾಣ ಅಥವಾ ಬ್ಲಾಗ್  ಗಳಿಲ್ಲ. ಆದರೆ ವೆಬ್ ಸರ್ಚ್ ನಲ್ಲಿ ಈ ಬಗ್ಗೆ ಹುಡುಕಿದರೆ ಆಂಗ್ಲ ಭಾಷೆಯಲ್ಲಿ ಹಲವಾರು ವೆಬ್ ತಾಣಗಳು ತೆರೆದುಕೊಳ್ಳುತ್ತವೆ. 

ಹಾಗಾಗಿಯೇ ಈ ಕೊರತೆಯನ್ನು ನಿವಾರಿಸಲು "ಗ್ರಾಮೀಣಾಭಿವ್ರುದ್ದಿ ,ಯುವಶಕ್ತಿ ,ಶಿಕ್ಷಣ " ವೆಂಬ ಮೂಲ ಮಂತ್ರ ಗಳನ್ನೊಳಗೊಂಡ "ಚುಕ್ಕಿ ಸಂಸ್ಥೆ" ಯ ವತಿಯಿಂದ ಕನ್ನಡ ಸ್ಪರ್ಧಾರ್ತಿ ,ಜ್ಞಾನಾರ್ಥಿ ಗಳಿಗಾಗಿ " ಕನ್ನಡ ಸ್ಪರ್ಧಾಯೋಧರು" ಎಂಬ ಸ್ವಾಭಿಮಾನದ ,ಕನ್ನಡತನದ ಬ್ಲಾಗ್ ನ್ನು ಕನ್ನಡಿಗರಿಗಾಗಿ ನಿರ್ಮಿಸಿದ್ದೇವೆ.    ಹೆಚ್ಚಾಗಿ ಗ್ರಾಮೀಣ ಭಾಗದ ಸ್ಪರ್ಧಾರ್ತಿ ಗಳಿಗೆ ಹಾಗು ಎಲ್ಲಾ ಕನ್ನಡಿಗರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಬ್ಲಾಗ್ ನಿರ್ಮಾಣವಾಗಿದೆ.

ಜಗತ್ತಿನಲ್ಲಿ, ಬದುಕಿನಲ್ಲಿ ಯಾವುದೂ  ಅಸಾದ್ಯವಲ್ಲ. ಅದನ್ನು ಭಾರತೀಯರು, ಕನ್ನಡಿಗರು ಈಗಾಗಲೇ  ಮಾಡಿ ತೋರಿಸಿದ್ದಾರೆ. ಕನ್ನಡಿಗರು  ಮತ್ತಸ್ಟು, ಮಗದಷ್ಟು ಸಾಧನೆಗಳನ್ನು ಮಾಡಲು , ಅವರ ಸಾಧನೆಯ ಹಾದಿಯಲ್ಲಿ ಒಬ್ಬ ನಿಜವಾದ ಗೆಳೆಯ ಈ ಚುಕ್ಕಿ ಸಂಸ್ಥೆ. ಈ ವಿಷಯಕ್ಕೆ ಸಂಬಂದಿಸಿದಂತೆ, ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu@gmail.com ಗೆ ಕಳುಹಿಸಿ.   

ಈ ವೆಬ್ ತಾಣವನ್ನು ಎಲ್ಲ ಕನ್ನಡಿಗರಿಗೂ ಪರಿಚಯಿಸಿ..... ***

ಅವರ ಸಾಧನೆಯ ಹಾದಿಯಲ್ಲಿ ನೀವು ಒಂದು ಚುಕ್ಕಿಯಾಗಿ. ............. ***

ಇದು ಕನ್ನಡಿಗರ  ಬ್ಲಾಗ್..........
ಕನ್ನಡ ಸ್ಪರ್ಧಾಯೋಧರಿಗಾಗಿ ಇರುವ ಬ್ಲಾಗ್. .............
ಕನ್ನಡಿಗರ ಶಕ್ತಿ/ಸಾಮರ್ಥ್ಯಕ್ಕೆ ದಿಕ್ಸೂಚಿಯಾಗುವಂತಹ  ಬ್ಲಾಗ್...........

ನಿಮ್ಮ ಅಮೂಲ್ಯ ಸಲಹೆಗಳಿಗೆ ಸ್ವಾಗತ.

 ಚುಕ್ಕಿ....

ಬಿಂದುವಿನಿಂದ ಅನಂತದೆಡೆಗೆ....

PLEASE VISIT- http://kannadaspardayodharu.blogspot.com

Thursday, August 19, 2010

ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ

              


                   ಕರ್ನಾಟಕ ಅಂಚೆ ವಲಯ ವು ಪೋಸ್ಟಲ್ ಹಾಗು ಸಾರ್ಟಿಂಗ್ ಸಹಾಯಕರ ಹುದ್ದೆಗೆ ಅರ್ಜಿ ಗಳನ್ನು ಕರೆದಿದೆ. ಕರ್ನಾಟಕದ ಎಲ್ಲಾ ಪ್ರಧಾನ ಅಂಚೆ ಕಛೇರಿಗಳು ಹಾಗು ಮುಖ್ಯ ವಾದ  ತಾಲೂಕು ಕೇಂದ್ರ ಗಳ ಉಪ ಅಂಚೆ ಕಛೇರಿಗಳಲ್ಲಿ ಆಗಸ್ಟ್ 20 ,2010 ರಂದು ಅರ್ಜಿಗಳು ದೊರೆಯುತ್ತವೆ.

ಮುಖ್ಯವಾದ ಅಂಶಗಳು :

  1. ಅರ್ಜಿಯ ಬೆಲೆ ರೂ  25 /- . ಅಂಚೆ ಕಚೇರಿಯ ಕೌಂಟರ್ ಗಳಲ್ಲಿ ಕೇವಲ ನಗದನ್ನು ಮಾತ್ರ ಪಾವತಿಸಿ ಪಡೆಯತಕ್ಕದ್ದು. 
  2. ಅರ್ಜಿಗಳನ್ನು ಇಲಾಖೆಯ ವೆಬ್ ಸೈಟ್ www .indiapost .gov .in ನಲ್ಲಿ ಕೂಡ  ಡವನ್   ಲೋಡ್ ಮಾಡಬಹುದು. ಆದರೆ ಅರ್ಜಿಯ ಜೊತೆ 25 ರೂ ಅಂಚೆ ಚೀಟಿ ಲಗತ್ತಿಸಬೇಕು.
  3. ಕನಿಸ್ಟ ವಿದ್ಯಾರ್ಹತೆ  : ಪಿ . ಯು. ಸಿ.
  4.  ಅರ್ಹತ ವಯಸ್ಸು : 18 ರಿಂದ 25   ವರ್ಷ ( ಕೆಲವು ಮೀಸಲಾತಿ ವರ್ಗಗಳನ್ನು ಹೊರತು ಪಡಿಸಿ, ಅರ್ಜಿ ನೋಡಿ ).
  5. ಕೊನೆಯ ದಿನಾಂಕ : ಅಕ್ಟೋಬರ್  5 ,2010
  6. ಸಾಮಾನ್ಯ ಆಯ್ಕೆ ಪರೀಕ್ಷೆ / ಟೈಪಿಂಗ್  / ಕಂಪ್ಯೂಟರ್ ಪರೀಕ್ಷೆ ಗಳು 14 -11 -2010 ಭಾನುವಾರದಂದು ಬೆಳಿಗ್ಗೆ  10 .00 ಘಂಟೆಯಿಂದ ಎಲ್ಲಾ ಕೇಂದ್ರಗಳಲ್ಲಿ ಒಟ್ಟಿಗೆ ನಡೆಯುತ್ತದೆ. 

ನಿಮ್ಮ ಗಮನಕ್ಕೆ :


  1. ಒಬ್ಬರು ಒಂದು ಅಂಚೆ ವಿಭಾಗಕ್ಕೆ ಒಂದರಂತೆ, ಎಷ್ಟು ಅರ್ಜಿಗಳನ್ನು ಹಾಕಬಹುದು. ಆದರೆ  ಒಂದು ಕಡೆ ಮಾತ್ರ ಪರೀಕ್ಷೆ ಎದುರಿಸಬೇಕು. 
  2. ಅರ್ಜಿಯ ಪ್ರತಿ ಕಾಲಂ ಗಳನ್ನು ಭರ್ತಿ ಮಾಡಿ. 
  3. ಅರ್ಜಿ ಹಾಕಿದ ಎಲ್ಲರಿಗೂ " ಪರೀಕ್ಷಾ ಆಹ್ವಾನ ಪತ್ರ " ಬರುವುದಿಲ್ಲ. ಇಲಾಖ ನಿನಯಮಗಳಿಗನುಸಾರ ಅರ್ಜಿಗಳನ್ನು ಪರಿಶೀಲಿಸಿ  ( ಮುಖ್ಯವಾಗಿ ಪಿ. ಯು. ಸಿ .ಅಂಕಗಳ ಆಧಾರ  ) ಕಾಲ್ ಲೆಟರ್ ಕಳುಹಿಸಲಾಗುವುದು. ಅಂತಹವರು ಮಾತ್ರ ಪರೀಕ್ಷೆಗೆ ಹಾಜರಾಗಬಹುದು. 
  4. ಪಿ. ಯು. ಸಿ. ಕನಿಸ್ಟ ವಿದ್ಯಾರ್ಹತೆಯಾಗಿದ್ದು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯುಳ್ಳವರು  ಕೂಡ ಅರ್ಜಿ ಸಲ್ಲಿಸಬಹುದು. ( ಆದರೆ ವಯಸ್ಸಿನ ಅರ್ಹತೆಯನ್ನು ಪರಿಪೂರ್ಣಗೊಳಿಸಿರಬೇಕು  )
  5. ಕಂಪ್ಯೂಟರ್    ಪರೀಕ್ಷೆ  ಯು  , ಡಾಟಾ ಎಂಟ್ರಿ ಹಾಗು ಪ್ರಬಂಧ ಟೈಪಿಸುವುದನ್ನು ಒಳಗೊಂಡಿರುತ್ತೆ. ಇಲ್ಲಿ ಸಮಯದ ಪರಿಪಾಲನೆ ಮುಖ್ಯವಾದುದು. 
  6. ಈ ಕೆಲಸವು ಕ್ಲರಿಕಲ್  ಗ್ರೇಡ್ ನದ್ದಾಗಿದು ಆಕರ್ಷಕ ಸಂಬಳ ವಿರುತ್ತದೆ. 
  7. ಇದು ಕೇಂದ್ರ ಸರ್ಕಾರಿ ನೌಕರಿ ಯಾಗಿದ್ದು, 6 ನೇ ವೇತನ  ಆಯೋಗದ ಅನ್ವಯ ಕೆಲಸಗಾರರಿಗೆ ಹಲವು ಅನುಕೂಲವಿರುತ್ತದೆ. 
  8. ಅರ್ಜಿ ಶುಲ್ಕ , ಪೋಸ್ಟೆಜ್   ಶುಲ್ಕ ಬಿಟ್ಟರೆ ಯಾವುದೇ ರೀತಿಯ ಲಂಚ /ವಗೈರೆ ಗಳನ್ನು ಯಾರಿಗೂ ಕೊಡಬೇಕಾಗಿಲ್ಲ . 

ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಿ. ಆಗಸ್ಟ್ 20 ,2010   ರ ಪ್ರಜಾವಾಣಿ ಪತ್ರಿಕೆ 7 ನೇ ಪುಟ ನೋಡಿ.  


ಅಂಚೆ ಇಲಾಖೆಯು ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಸೇವಾ ಸಂಘಟನೆ ಯಾಗಿದ್ದು , ಪ್ರತಿಭಾವಂತರಿಗೆ , ಸೇವಾ ಮನೋಭಾವ ವುಳ್ಳವರಿಗೆ ಸೂಕ್ತ ವೇದಿಕೆ ಯಾಗಿದೆ. ಪ್ರತಿಭಾವಂತ ಕನ್ನಡಿಗರು  ಇದರ ಅನುಕೂಲ ಪಡೆದುಕೊಳ್ಳಬೇಕೆಂಬುದೇ   ನಮ್ಮ ಸಂಸ್ಥೆಯ ಆಶಯ. ನಿಮ್ಮ ಯಾತ್ರೆಗೆ ಶುಭವಾಗಲಿ.

                     *ಚುಕ್ಕಿ ಸಂಸ್ಥೆ (ರೀ) ,ಮೈಸೂರು - 571105*

  

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......