Thursday, March 31, 2016

ವಿನಮ್ರ ಮನವಿ .

ಸಾಹಿತ್ಯ  ಪ್ರಿಯರೇ , ಸಹೃದಯ ಗೆಳೆಯರೇ , ನಿಮ್ಮೆಲ್ಲರಿಗೂ ನಿಮ್ಮ ಪ್ರೀತಿಯ ಗೆಳೆಯಲಿಂಗೇಶ್ ಹುಣಸೂರು  ಮಾಡುವ ನಮಸ್ಕಾರಗಳು ಹಾಗು ವಿನಮ್ರ ಮನವಿ .

ನನ್ನ  ಬದುಕಿನ  ಈವರೆವಿಗಿನ ಅನುಭವಗಳು , ಕನಸುಗಳು ,ನೆನಪುಗಳು  ಎಲ್ಲವನ್ನುಒಟ್ಟುಗೂಡಿಸಿ "ಬಿಂದುವಿನಿಂದ ಅನಂತದೆಡೆಗೆ " ಕವನ ಸಂಕಲ ರೂಪುಗೊಂಡಿದೆ .

ನಿಮ್ಮಿಂದ ಹೊರತಾದ ನೆನಪುಗಳು , ಕನಸುಗಳು , ಕಲ್ಪನೆಗಳು  ನನ್ನ ಬದುಕಿನಲ್ಲಿಯಾವುದೂ  ಇಲ್ಲ . ಹಾಗಾಗೆ ನನ್ನೆಲ್ಲಾ ಗೆಳೆಯರ ಅಧಮ್ಯ ಪ್ರೀತಿಗೆ  ಕೃತಿಯನ್ನು ಸಮರ್ಪಿಸಿದ್ದೇನೆ .

ಇಲ್ಲಿ ಬಿಟ್ಟು ಹೋದವರ ಬಗೆಗೆ ಕಾಡುವ ನೆನಪುಗಳಿವೆ., ಉಳಿದು ಕೊಂಡವರ ಬಗೆಗೆಪ್ರೀತಿ ಇದೆ , ಗೆಳೆಯರ ಬಗೆಗೆ ಕಾಳಜಿ ಇದೆ , ಸಮಾಜದ ಬಗೆಗೆ ಕಳಕಳಿ ಇದೆ , ಪ್ರೀತಿಯಪಿಸುಮಾತುಗಳಿವೆ , ಬದುಕಿಗೆ ಸ್ಪೂರ್ತಿಯ ಸಾಲುಗಳಿವೆ , ಸುಂದರ ಕಲ್ಪನೆಗಳಿವೆ ,ಕನಸುಗಳ ಚಿತ್ತಾರವಿದೆ ... ಒಟ್ಟಿನಲ್ಲಿ ನೀವು ನಿಮ್ಮನ್ನೊಮ್ಮೆ  ಕವಿತೆಗಳ ಕನ್ನಡಿಯಲ್ಲಿಅನಾರಣ ಮಾಡಿಕೊಳ್ಳಬಹುದು .

*ನಾಡಿನ ಖ್ಯಾತ ವಿಮರ್ಶಕರಾದ ಡಾ//ಬೈರಮಂಗಲ ರಾಮೇಗೌಡ ಅವರು ಮುನ್ನುಡಿಬರೆದಿದ್ದಾರೆ , ಖ್ಯಾತ ಸಾಹಿತಿ ಶ್ರೀ ದ್ವಾರನಕುಂಟೆ  ಪಾತಣ್ಣ ಅವರು ಬೆನ್ನುಡಿ ಬರೆದಿದ್ದಾರೆ .

ಇವೆಲ್ಲದಕ್ಕೂ ಒಂದು ಬೆಲೆ ಇದೆ  ಅದು ನಿಮ್ಮ ಪ್ರೀತಿನಿಮ್ಮಗಳ ಪ್ರೀತಿಗೆ , ಅಭಿಮಾನಕ್ಕೆಬೆಲೆ ಕಟ್ಟಲು ಸಾಧ್ಯವೇ ?!ಆದರೂ  ನಮ್ಮ ಮುಂದಿನ ಸಮಾಜಮುಖಿ ಕನಸುಗಳಸಾಕಾರಕ್ಕೆ ೧೦೦ ರೂ  ಎಂದು ನಿಗಧಿ ಮಾಡಿದ್ದೇವೆ .


* ಕೃತಿಯಿಂದ ಬರುವ ಹಣದಲ್ಲಿ ನಾವು ಮತ್ತು ನಮ್ಮೂರು " ಎಂಬ ಪುಸ್ತಕಸರಣಿಯನ್ನು ಗೆಳೆಯರೆಲ್ಲಾ ಕೂಡಿ ಪ್ರಾರಂಭಿಸುತ್ತಿದ್ದೇವೆಪುಸ್ತಕಗಳನ್ನು ರಾಜ್ಯದ ಎಲ್ಲಾಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ನೀಡಲಾಗುವುದು .

ರಾಜ್ಯದ ಅಂಧ ವಿಧ್ಯಾರ್ಥಿಗಳ ಸಾಹಿತ್ಯಿಕ ಆಸಕ್ತಿಯನ್ನು ಉತ್ತೇಜಿಸಲು  ಕವನಸಂಕಲನದ  ಮತ್ತು  ಪ್ರಕಟಗೊಳ್ಳುವ ಉಚಿತ ಪುಸ್ತಕ  ಧ್ವನಿ ಪಟ್ಯ   ಮಾಡಿ ಉಚಿತವಾಗಿಅಂಧ ಮಕ್ಕಳ ಶಾಲೆಗಳಿಗೆ ಒದಗಿಸಿ , ಸಂವಾದ ಕ್ಕೆ ಅವಕಾಶ ಕಲ್ಪಿಸುವುದು .ಮೊದಲಿಗೆ ಕರ್ನಾಟಕ ನಾಡು ನುಡಿ  ಬಗೆಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ೧೦೦೦ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಪ್ರಕಟಣೆ .

*ಅತಿ ಹೆಚ್ಚು ಪುಸ್ತಕ ಕೊಂಡು   ಜ್ಞಾನ ದಾಸೋಹ ಕನಸಿನಲ್ಲಿ ಪಾಲ್ಗೊಂಡು , ಅಂಧಮಕ್ಕಳ ಸಾಹಿತ್ಯ ಪ್ರೀತಿಗೆ ಉಚಿತ ದ್ವನಿ ಪಟ್ಯ  ಉಡುಗೊರೆ ಕೊಡುವ ಸಹೃದಯರಹೆಸರನ್ನು   , ಉಚಿತ ಪುಸ್ತಕ ಹಾಗು ಸಿಡಿ ಯಲ್ಲಿ ಮುದ್ರಿಸಿ , ಅವರ ಸೇವೆಯನ್ನುನೆನೆಯಲಾಗುವುದು .

ಪ್ರತಿ ವರ್ಷ ಒಂದು ಪುಸ್ತಕವನ್ನು  ಯೋಜನೆ ಯಡಿಯಲಿ  ಪ್ರಕಟಿಸಲಾಗುವುದು 

ಆತ್ಮಿಯರೇ ಹೆಚ್ಹು ಹೆಚ್ಚು ಪುಸ್ತಕ ಕೊಂಡುಕೊಳ್ಳಿ , ನಿಮ್ಮ ಗೆಳೆಯರಿಗೂ ತಿಳಿಸಿ ,ಉಡುಗೊರೆ ನೀಡಿ ,  ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಮ್ಮ ಕನ್ನಡ ಮಕ್ಕಳಜ್ಞಾನ ವೃದ್ದಿಸುವ   ನಮ್ಮ ಪುಟ್ಟ ಪ್ರಯತ್ನದಲ್ಲಿ , ನೀವೂ ಪಾಲ್ಗೊಳ್ಳಿ ,  ಮೂಲಕಕನ್ನಡ  ಕೆಲಸಸಮಾಜ ಸೇವೆ ಯಲ್ಲಿ ನಿಮ್ಮದು ಹೆಜ್ಜೆ ಗುರುತಿರಲಿ .

ನಮ್ಮ  ಕನಸುಗಳ ಬಗೆಗೆ ನಿಮ್ಮ ಅಭಿಪ್ರಾಯ , ಸಲಹೆ ಗಳನ್ನು ತಪ್ಪದೇ ತಿಳಿಸಿ .

ಚುಕ್ಕಿ ಗೆಳೆಯರ ಬಳಗದ ಪರವಾಗಿ ,

ನಿಮ್ಮವ
ಲಿಂಗೇಶ್ ಹುಣಸೂರ್
ಮಿಂಚೆ :lingeshkc9@gmail.com
ವೆಬ್ :http://lingeshhunsur.blogspot.in
ನಿಸ್ತಂತು ದೂ :9964438393

ಅಂಚೆ ವಿಳಾಸ : ಲಿಂಗೇಶ್ ಹುಣಸೂರು ,
ಅಂಚೆ ಸಹಾಯಕ ,  ಎಸ ವಿ ವಿ ಏನ್ ಭವನ ,
ಎಸ .ಬಿ ಎಂ ಪ್ರಧಾನ ಕಚೇರಿ ಎದುರು ,
ಬೆಂಗಳೂರು -೫೬೦೦೦೯

ಅಂಚೆ ಮೂಲಕ ಪ್ರತಿಗೆ ೧೨೦ ರು ಗಳನ್ನೂ  -ಎಂ  ಮಾಡಿ ಮಾಹಿತಿ ನೀಡಿ .

ಧನ್ಯವಾದಗಳು

Friday, May 31, 2013

ತುಂಬು ಹೃದಯದ ಆಹ್ವಾನ..

ಆತ್ಮೀಯ ಗೆಳೆಯ , ಚುಕ್ಕಿ ಸಂಸ್ಥೆ ಯ ಸಂಘಟನಾ ಕಾರ್ಯದರ್ಶಿ, ಮಧುಸೂಧನ್  ಎಸ್. ಕೆ. ಮದುವೆ ನಾಡಿದ್ದು 02/06/2013 ರಂದು ಹುಣಸೂರಿನ ನಂಜಮ್ಮ ಚನ್ನಬಸಮ್ಮ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ. ದಯವಿಟ್ಟು ಎಲ್ಲಾ ಸ್ನೇಹಿತರು ಬನ್ನಿ.

ಮಧು ನನಗಿಂತ ಓರಗೆಯಲ್ಲಿ ಹಿರಿಯ. ಹುಣಸೂರಿನ ಸಂತ ಜೋಸೆಫರ  ಪ್ರೌಢ ಶಾಲೆ ಯಲ್ಲಿ ಕಲಿಯುವಾಗ ನನಗಿಂತ ಒಂದು ವರ್ಶ ಸೀನಿಯರ್. ಆತ ಸಲುಗೆಯಲ್ಲಿ ಸೀನಿಯರ್ ಆಗಿರಲೆ ಇಲ್ಲ. ಅಂತಹ ಆತ್ಮೀಯತೆ ಅವನ ಒಡನಾಟ. ಬಟ್ ಆತ ಗೆಳೆತನದಲ್ಲಿ, ಪ್ರೀತಿಯಲ್ಲಿ, ಸಮಾಜಮುಖಿ ಕೆಲಸಗಳಲ್ಲಿ, ಗುಣ -ನಡತೆ-ಸಂಸ್ಕಾರ-ಸಂಪರ್ಕ ಗಳಲ್ಲಿ ನಿಜಕ್ಕೂ ಸೀನಿಯರ್. ಹಾಗಾಗಿಯೇ ಗೆಳೆಯರೆಲ್ಲ ಕೂಡಿ ಕಟ್ಟಿದ ಸಂಸ್ಥೆ " ಚುಕ್ಕಿ ಸಂಸ್ಥೆ" ಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ , ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತೂ ಇಂತೂ ಮಧು ತನ್ನ ಬದುಕಿನ , ಹೊಸ ಕನಸುಗಳ ಯಾತ್ರೆ ಯ ಸಂಘಟನೆಗೆ ನಿಂತಿದ್ದಾರೆ. ಕೆ. ಆರ್. ಆಶಾರಾಣಿಯವರನ್ನು ಹೊಸಬದುಕಿನ ರಥಯಾತ್ರೆಗೆ ಜೊತೆಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ತಾಳಿ ಕಟ್ಟುವ ಶುಭ ವೇಳೆ ನಾವೆಲ್ಲಾ ಸಾಕ್ಷಿಯಾಗುವ. ನಿರ್ಮಲ ಮನಸ್ಸಿನ ಸ್ನೇಹ ಜೀವಿ, ಆತ್ಮೀಯ ಗೆಳೆಯ ನ ಹೊಸ ಬದುಕಿಗೆ ಮನತುಂಬಿ ಹಾರೈಸುವ. ನೀವೂ ಬನ್ನಿ. ಹಾಗೆ ನನ್ನ ಮನೆ "ಧನ್ಯ"ಕ್ಕೂ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ.


ಬಹಳ ದೂರ. ಇರುವುದೊಂದು ಭಾನುವಾರ, ಸಕತ್ತ್ ಮಜ ಮಾಡೋಣ ಅಂತ ತೀರ್ಮಾನಿಸಿದ್ದರೆ ಅಲ್ಲಂದಲೇ ಹರಸಿ. ನಮ್ಮ-ನಿಮ್ಮೆಲ್ಲರ ಹಾರೈಕೆಗಳು ಆ ಹೊಸ ಜೋಡಿ ಯನ್ನು ಸದಾ ಕಾಲ ಸಂತಸದಲ್ಲಿ ತೇಲಿಸಲಿ. ಇಲ್ಲ ಬಿಡುವು ಮಾಡಿಕೊಂಡು ಒಂದು ಸಂದೇಶ ಕಳುಹಿಸಿ. ಅವನ ಜಂಘ್ಹಮ ಘಂಟೆ ಯ ನಂಬರ್ 9060369096, 9620552706.

ಮದುವೆಯಲ್ಲಿ ಭೆಟ್ಟಿಯಾಗೋಣ. ಅಲ್ಲಿಯವರೆಗೆ ಮಾತು ಹಿಡಿದಿಟ್ಟಿರಿ. ಹಳೆ ನೆನಪುಗಳನ್ನು ಹರಟೋಣ.

ಶುಭ ಸಂಜೆ, ಶುಭ ವಾರಂತ್ಯ.

ನಿಮ್ಮ ನೀರಿಕ್ಷೆಯಲ್ಲಿ..

ಚುಕಿ........

Thursday, May 30, 2013

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಯ ಉದ್ಯೋಗವಕಾಶ.

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಯ ಉದ್ಯೋಗವಕಾಶ.

ಗಣಿತ,ಅರ್ಥಶಾಸ್ತ್ರ, ಆಂಗ್ಲಭಾಷೆ, ವಾಣಿಜ್ಯ ವಿಷಯಗಳನ್ನು ಬೊಧಿಸಲು.

ವಿವರಗಳಿಗೆ ಸಂಪರ್ಕಿಸಿ:

ಶ್ರೀ.ರೋಹಿತ್ ಕುಮಾರ್,
ಪ್ರಾಂಶುಪಾಲರು,
ಬ್ರೈಟ್ ವೇ ಪಿ.ಯು. ಕಾಲೇಜ್,
ನಂ:105, 12 ನೇ ಮೈನ್,
ಬಿ.ಹೆಚ್.ಸಿ.ಎಸ್ ಲೇ ಔಟ್ ನ ಎದುರು,
ಗೌಡನಪಾಲ್ಯ ದ ಹತ್ತಿರ,
ಸುಬ್ರಮಣ್ಯಪುರ ಅಂಚೆ,
ಉತ್ತರಹಳ್ಳಿ ಹೊಬಳಿ,
ಬೆಂಗಳೂರು-೫೬೦೦೬೧

ಸಂಪರ್ಕಕ್ಕೆ ದೂರವಾಣಿ: 2665388

ಸುಮಾರು  ಹದಿಮೂರು ಸಾವಿರದವರೆಗೆ ಸಂಬಳ ನೀಡಬಹುದು. ಈ ಅವಕಾಶವನ್ನು ನಿರುದ್ಯೋಗ ಸ್ನಾತಕೋತ್ತರ ಪದವಿಧರರು ಸದುಪಯೋಗ ಪಡಿಸಿಕೊಳ್ಳಿ.

Monday, July 9, 2012

According to CHANAKYA……………

According to CHANAKYA……………

 Learn from the mistakes of others. You can’t live long enough to make them all yourselves!

 A person should not be too hones. Straight trees are cut first and so are honest people.

 Even if a snake is not poisonous, it should pretend to be venomous.

 There is some self-interest behind every friendship. There is no friendship without self-interest. This is a bitter truth.

 As soon as the fear approaches near, attack and destroy it.

 The world’s biggest power is the youth and beauty of a woman.

 Once your start a working on something, don’t be afraid of failure and don’t abandon it. People who work sincerely are the happiest.

 The fragrance of flowers spreads only in the direction of the wind. But the goodness of a person spreads in all direction.

 God is not present in idols. Your feelings are your god. The soul is your temple.

 A man is great by deeds, not by birth.

 Never make friends with people who are above or below you in status. Such friendship will never give your any happiness.

 Treat your kind like a darling for the first five years. For the next five years, scold them. By the time they turn sixteen, treat them like a friend. Your grown up children are your best friends.

 Books are as useful to a stupid person as a mirror is useful to a blind person.

 Education is the Best Friend. An Educated person is Respected Everywhere. Education beats the Beauty and the youth.

 Before you start some work, always ask yourself three questions-why am I doing it, what the results might be and will I be successful. Only when you think deeply and find satisfactory answers to these questions, go ahead.

ಉದ್ಯೋಗ ಮೇಳ

ಜುಲೈ 14, 15 ರಂದು ಚಿಕ್ಕಬಳ್ಳಾಪುರದ ಎಸ್. ಜೆ.ಸಿ. ತಾಂತ್ರಿಕ ವಿದ್ಯಾಲಯದಲ್ಲಿ 2012 ನೆ ಸಾಲಿನ ಉದ್ಯೋಗ ಮೇಳ ನಡೆಯಲಿದೆ. ದೇಶ-ವಿದೇಶಗಳ ಒಟ್ಟು 126 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಪಾಲ್ಗೋಳ್ಳಲಿವೆ. ಉದ್ಯೋಗಾಕಾಂಕ್ಷಿಗಳಿಗೆ ನೋಂದಣಿ ಉಚಿತ. ವಿವರಗಳಿಗೆ http://www.udyogamela.com ನೋಡಿ, ತಮ್ಮ ವಿಧ್ಯಾರ್ಹತೆ, ಮತ್ತಿತ್ತರ ವಿವರ ನೋಂದಾಯಿಸಿಕೋಳ್ಳಬಹುದು. ಅಭ್ಯರ್ಥಿಗಳು ಒದಗಿಸುವ ಮಾಹಿತಿಯನ್ನು ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳಿಗೆ ನೀಡಲಾಗುವುದು. 126 ಕಂಪನಿಗಳು ಭಾಗವಹಿಸುವ ಖಚಿತತೆ ಇದೆ. ಆನ್ ಲೈನ್ ಮೂಲಕ ನೋಂದಣಿ ಮಾಡದಿದ್ದರೂ , ಮೇಳದಲ್ಲಿ ಪಾಲ್ಗೋಳ್ಲಬಹುದು. ಸ್ಥಳದಲ್ಲೇ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.


(ಮಾಹಿತಿ: ಪ್ರಜಾವಾಣಿ ದಿನಪತ್ರಿಕೆ, ದಿನಾಂಕ 09/07/2012 ಪುಟ 02)

Saturday, February 4, 2012

KANNADASPARDAYODHARU

ಡಿಯರ್ ಪ್ರೆಂಡ್ಸ್ ಅಂಡ್ ಹಿತೈಷಿಗಳೇ, 

ನಿಮಗೆಲ್ಲರಿಗೂ ನಿಮ್ಮ ಚುಕ್ಕಿ ಸಂಸ್ಥೆಯ ಸ್ನೇಹಪೂರ್ವಕ ನಮನಗಳು.ಅಂತರ್ಜಾಲದಲ್ಲಿ ಹಲವಾರು ಬಗೆಯ ವಸ್ತು ವಿಷಯಗಳ, ವಿಭಿನ್ನ ದೃಷ್ಟಿ ಕೋನಗಳ ಹಲವಾರು   ಕನ್ನಡ ಭಾಷೆಯ  ತಾಣಗಳಿರುವುದು ನಿಜಕ್ಕೂ ಸಂತಸದ, ಕನ್ನಡ ಸ್ವಾಭಿಮಾನದ, ಹೆಮ್ಮಯ ವಿಷಯ.  ಈ ನಿಟ್ಟಿನಲ್ಲಿ ಹಲವಾರು  ಕನ್ನಡ ಮನಸ್ಸುಗಳು ಕನ್ನಡಿಗರನ್ನು ಬೆಸೆಯಲು, ಕನ್ನಡವನ್ನು ಪಸರಿಸಲು ಬಹಳಷ್ಟು ಶ್ರಮಪಡುತ್ತಿದ್ದಾರೆ. 

ಆದರೆ ಅಂತರ್ಜಾಲದಲ್ಲಿ,  ನಾಗರಿಕ ಸೇವಾ ಪರೀಕ್ಷೆಗಳನ್ನು( CIVIL SERVICE EXAMS - KPSC/UPSE/ETC.,) ತೆಗೆದುಕೊಳ್ಳುವವರಿಗೆ ಮಾಹಿತಿ/ಮಾರ್ಗದರ್ಶನ /ಅಧ್ಯಯನ  ಸಾಮಾಗ್ರಿ /ಆಪ್ತ ಸಮಾಲೋಚನೆ ಗಾಗಿ ನಿರ್ದಿಸ್ಟ ಕನ್ನಡ ವೆಬ್ ತಾಣ ಅಥವಾ ಬ್ಲಾಗ್  ಗಳಿಲ್ಲ. ಆದರೆ ವೆಬ್ ಸರ್ಚ್ ನಲ್ಲಿ ಈ ಬಗ್ಗೆ ಹುಡುಕಿದರೆ ಆಂಗ್ಲ ಭಾಷೆಯಲ್ಲಿ ಹಲವಾರು ವೆಬ್ ತಾಣಗಳು ತೆರೆದುಕೊಳ್ಳುತ್ತವೆ. 

ಹಾಗಾಗಿಯೇ ಈ ಕೊರತೆಯನ್ನು ನಿವಾರಿಸಲು "ಗ್ರಾಮೀಣಾಭಿವ್ರುದ್ದಿ ,ಯುವಶಕ್ತಿ ,ಶಿಕ್ಷಣ " ವೆಂಬ ಮೂಲ ಮಂತ್ರ ಗಳನ್ನೊಳಗೊಂಡ "ಚುಕ್ಕಿ ಸಂಸ್ಥೆ" ಯ ವತಿಯಿಂದ ಕನ್ನಡ ಸ್ಪರ್ಧಾರ್ತಿ ,ಜ್ಞಾನಾರ್ಥಿ ಗಳಿಗಾಗಿ " ಕನ್ನಡ ಸ್ಪರ್ಧಾಯೋಧರು" ಎಂಬ ಸ್ವಾಭಿಮಾನದ ,ಕನ್ನಡತನದ ಬ್ಲಾಗ್ ನ್ನು ಕನ್ನಡಿಗರಿಗಾಗಿ ನಿರ್ಮಿಸಿದ್ದೇವೆ.    ಹೆಚ್ಚಾಗಿ ಗ್ರಾಮೀಣ ಭಾಗದ ಸ್ಪರ್ಧಾರ್ತಿ ಗಳಿಗೆ ಹಾಗು ಎಲ್ಲಾ ಕನ್ನಡಿಗರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಬ್ಲಾಗ್ ನಿರ್ಮಾಣವಾಗಿದೆ.

ಜಗತ್ತಿನಲ್ಲಿ, ಬದುಕಿನಲ್ಲಿ ಯಾವುದೂ  ಅಸಾದ್ಯವಲ್ಲ. ಅದನ್ನು ಭಾರತೀಯರು, ಕನ್ನಡಿಗರು ಈಗಾಗಲೇ  ಮಾಡಿ ತೋರಿಸಿದ್ದಾರೆ. ಕನ್ನಡಿಗರು  ಮತ್ತಸ್ಟು, ಮಗದಷ್ಟು ಸಾಧನೆಗಳನ್ನು ಮಾಡಲು , ಅವರ ಸಾಧನೆಯ ಹಾದಿಯಲ್ಲಿ ಒಬ್ಬ ನಿಜವಾದ ಗೆಳೆಯ ಈ ಚುಕ್ಕಿ ಸಂಸ್ಥೆ. ಈ ವಿಷಯಕ್ಕೆ ಸಂಬಂದಿಸಿದಂತೆ, ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu@gmail.com ಗೆ ಕಳುಹಿಸಿ.   

ಈ ವೆಬ್ ತಾಣವನ್ನು ಎಲ್ಲ ಕನ್ನಡಿಗರಿಗೂ ಪರಿಚಯಿಸಿ..... ***

ಅವರ ಸಾಧನೆಯ ಹಾದಿಯಲ್ಲಿ ನೀವು ಒಂದು ಚುಕ್ಕಿಯಾಗಿ. ............. ***

ಇದು ಕನ್ನಡಿಗರ  ಬ್ಲಾಗ್..........
ಕನ್ನಡ ಸ್ಪರ್ಧಾಯೋಧರಿಗಾಗಿ ಇರುವ ಬ್ಲಾಗ್. .............
ಕನ್ನಡಿಗರ ಶಕ್ತಿ/ಸಾಮರ್ಥ್ಯಕ್ಕೆ ದಿಕ್ಸೂಚಿಯಾಗುವಂತಹ  ಬ್ಲಾಗ್...........

ನಿಮ್ಮ ಅಮೂಲ್ಯ ಸಲಹೆಗಳಿಗೆ ಸ್ವಾಗತ.

 ಚುಕ್ಕಿ....

ಬಿಂದುವಿನಿಂದ ಅನಂತದೆಡೆಗೆ....

PLEASE VISIT- http://kannadaspardayodharu.blogspot.com

Friday, November 18, 2011

"ಸ್ಪರ್ಧಾ ಮಿತ್ರ " ವತಿಯಿಂದ KAS/IAS ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ದಿನಾಂಕ 12 /02 /2012 ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ

ಎಲ್ಲ ಕನ್ನಡ ಬಂಧುಗಳಿಗೆ ನಮಸ್ತೆ,


ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದು ಸ್ಪರ್ದಾತ್ಮಕ ಯುಗ, ಕ್ಷಣ ಕ್ಷಣಕ್ಕೂ ಸ್ಪರ್ಧೆ ...???!!!

ಸ್ಪರ್ಧಾ ಪ್ರಪಂಚದಲ್ಲಿ ಎಂಟೆದೆಯ ಭಂಟರಾದ ಕನ್ನಡಿಗರು ಮುನ್ನುಗ್ಗಿ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಹಡೆದ ತಂದೆತಾಯಿಗಳಿಗೆ, ಜನ್ಮ ಕೊಟ್ಟ ಈ ಕರುನಾಡಿಗೆ ಕೀರ್ತಿ ತರಬೇಕೆಂಬುದೆ "ಚುಕ್ಕಿ ಸಂಸ್ಥೆ"  ಯ ಆಶಯ.

ಯಾವುದೇ ಪರೀಕ್ಷೆಗೆ ಸಿದ್ದರಾಗಬೇಕಾದರೆ  ತರಭೇತಿ ಅವಶ್ಯಕ. ನುರಿತ ವಿಷಯ ಪಾಂಡಿತ್ಯ ಉಳ್ಳ ತರಬೇತುದಾರರಿಂದ ತರಬೇತಿ ಪಡೆದು  , ಅವರ ಮಾರ್ಗದರ್ಶನದ ಜೊತೆಗೆ, ನಿಮ್ಮ ಪರಿಶ್ರಮ, ಛಲ, ಸವಾಲುಗಳನ್ನು ಭೇದಿಸುವ ಎದೆಗಾರಿಕೆ,  ಶ್ರದ್ದೆ   ಇದ್ದರೆ ಸ್ಪರ್ಧಾತ್ಮಕ   ಪರೀಕ್ಷೆಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಸ್ಪರ್ಧಾರ್ತಿ   ಗಳ  ಕನಸುಗಳಿಗೆ ಭರವಸೆ ಮೂಡಿಸುವ , ಅಪಾರ ಪಾಂಡಿತ್ಯ ಹೊಂದಿರುವ , ಸಮಾಜಮುಖಿ, ಸ್ನೇಹಶೀಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರ ಕರುನಾಡ ರಾಜಧಾನಿಯಲ್ಲಿ ಜನ್ಮ ತಾಳಿದೆ.


ಅದುವೇ " ಸ್ಪರ್ಧಾ ಮಿತ್ರ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರ". ವಿಜಯನಗರ ಸಮೀಪವಿರುವ, ಆರ್.ಪಿ.ಸಿ ಲೇಔಟ್ ಬಸ್ ನಿಲ್ದಾಣದ ಸಮೀಪ ಹಂಪಿನಗರ ಅಂಚೆ ಕಚೇರಿ ಗೆ ಹೋಗುವ ರಸ್ತೆಯಲ್ಲಿ, ೮ ನೇ ಮೇನ್ ನ PRAKAASH YOGI INTERNATIONAL FOUNDATION (R) ನ ಕಟ್ಟಡ ಡ ಮೂರನೇ ಮಹಡಿಯಲ್ಲಿ ಜ್ನಾನಾರ್ಥಿಗಳ ಕನಸುಗಳಿಗೆ ಭರವಸೆ ಮೂಡಿಸುವ ಸ್ಪರ್ಧಾ ಮಿತ್ರ , ಎಲ್ಲಾ ಸ್ಪರ್ಧಾರ್ತಿ ಗಳನ್ನು ಕೈ ಬಿಸಿ ಕರೆಯುತ್ತಿದೆ. ಯಾರಿಗೂ ಯಾವುದೇ ರೀತಿಯಲ್ಲಿ ಹೊರೆಯಾಗದ ರೀತಿಯಲ್ಲಿ , ವಿಷಯ ನೈಪುಣ್ಯತೆ ಪಡೆದ ವಿಶೇಷ ಪರಿಣಿತ  ರಿಂದ   ಇಲ್ಲಿ ತರಭೇತಿ ಪಡೆಯಬಹುದಾಗಿದೆ.

ದಿನಾಂಕ 12 /02 /2012  ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ ಸ್ಪರ್ಧಾರ್ತಿಗಳ ಕನಸುಗಳಿಗೆ ಭರವಸೆ ಮೂಡಿಸುವ "ಸ್ಪರ್ಧಾ ಮಿತ್ರ " ವತಿಯಿಂದ  KAS/IAS ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ವನ್ನು ಏರ್ಪಡಿಸಲಾಗಿದೆ. ಹಾಗಾಗಿ ಆಸಕ್ತ ವಿದ್ಯಾರ್ಥಿಗಳು/ಸ್ಪರ್ಧಾರ್ತಿಗಳು ಇದರ ಅನುಕೂಲ ಪಡೆದುಕೊಂಡು ನಾಗರಿಕ ಸೇವೆಗಳ ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂಬುದೇ ನಮ್ಮ ಭಿನ್ನಹ.

ವಿವರಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು  ಸಂಪರ್ಕಿಸಿ.
೦೧: 08023202044
೦೨: 9611396947
೦೩: 8277198744ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu @ gmail.com ಅಥವಾ chukkisamsthe@ gmail ಮಿಂಚೆ ಗೆ ಕಳುಹಿಸಿ . ಜ್ಞಾನವನ್ನು ಹಂಚಿಕೊಳ್ಳೋಣ, ಮಾಹಿತಿ ತಿಳಿದು ಜಾಗೃತರಾಗೋಣ.

http://kannadaspardayodharu.blogspot.com

ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ ...

--

* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)
+91-9480211007

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......