ಕರ್ನಾಟಕ ಅಂಚೆ ವಲಯ ವು ಪೋಸ್ಟಲ್ ಹಾಗು ಸಾರ್ಟಿಂಗ್ ಸಹಾಯಕರ ಹುದ್ದೆಗೆ ಅರ್ಜಿ ಗಳನ್ನು ಕರೆದಿದೆ. ಕರ್ನಾಟಕದ ಎಲ್ಲಾ ಪ್ರಧಾನ ಅಂಚೆ ಕಛೇರಿಗಳು ಹಾಗು ಮುಖ್ಯ ವಾದ ತಾಲೂಕು ಕೇಂದ್ರ ಗಳ ಉಪ ಅಂಚೆ ಕಛೇರಿಗಳಲ್ಲಿ ಆಗಸ್ಟ್ 20 ,2010 ರಂದು ಅರ್ಜಿಗಳು ದೊರೆಯುತ್ತವೆ.
ಮುಖ್ಯವಾದ ಅಂಶಗಳು :
- ಅರ್ಜಿಯ ಬೆಲೆ ರೂ 25 /- . ಅಂಚೆ ಕಚೇರಿಯ ಕೌಂಟರ್ ಗಳಲ್ಲಿ ಕೇವಲ ನಗದನ್ನು ಮಾತ್ರ ಪಾವತಿಸಿ ಪಡೆಯತಕ್ಕದ್ದು.
- ಅರ್ಜಿಗಳನ್ನು ಇಲಾಖೆಯ ವೆಬ್ ಸೈಟ್ www .indiapost .gov .in ನಲ್ಲಿ ಕೂಡ ಡವನ್ ಲೋಡ್ ಮಾಡಬಹುದು. ಆದರೆ ಅರ್ಜಿಯ ಜೊತೆ 25 ರೂ ಅಂಚೆ ಚೀಟಿ ಲಗತ್ತಿಸಬೇಕು.
- ಕನಿಸ್ಟ ವಿದ್ಯಾರ್ಹತೆ : ಪಿ . ಯು. ಸಿ.
- ಅರ್ಹತ ವಯಸ್ಸು : 18 ರಿಂದ 25 ವರ್ಷ ( ಕೆಲವು ಮೀಸಲಾತಿ ವರ್ಗಗಳನ್ನು ಹೊರತು ಪಡಿಸಿ, ಅರ್ಜಿ ನೋಡಿ ).
- ಕೊನೆಯ ದಿನಾಂಕ : ಅಕ್ಟೋಬರ್ 5 ,2010
- ಸಾಮಾನ್ಯ ಆಯ್ಕೆ ಪರೀಕ್ಷೆ / ಟೈಪಿಂಗ್ / ಕಂಪ್ಯೂಟರ್ ಪರೀಕ್ಷೆ ಗಳು 14 -11 -2010 ಭಾನುವಾರದಂದು ಬೆಳಿಗ್ಗೆ 10 .00 ಘಂಟೆಯಿಂದ ಎಲ್ಲಾ ಕೇಂದ್ರಗಳಲ್ಲಿ ಒಟ್ಟಿಗೆ ನಡೆಯುತ್ತದೆ.
ನಿಮ್ಮ ಗಮನಕ್ಕೆ :
- ಒಬ್ಬರು ಒಂದು ಅಂಚೆ ವಿಭಾಗಕ್ಕೆ ಒಂದರಂತೆ, ಎಷ್ಟು ಅರ್ಜಿಗಳನ್ನು ಹಾಕಬಹುದು. ಆದರೆ ಒಂದು ಕಡೆ ಮಾತ್ರ ಪರೀಕ್ಷೆ ಎದುರಿಸಬೇಕು.
- ಅರ್ಜಿಯ ಪ್ರತಿ ಕಾಲಂ ಗಳನ್ನು ಭರ್ತಿ ಮಾಡಿ.
- ಅರ್ಜಿ ಹಾಕಿದ ಎಲ್ಲರಿಗೂ " ಪರೀಕ್ಷಾ ಆಹ್ವಾನ ಪತ್ರ " ಬರುವುದಿಲ್ಲ. ಇಲಾಖ ನಿನಯಮಗಳಿಗನುಸಾರ ಅರ್ಜಿಗಳನ್ನು ಪರಿಶೀಲಿಸಿ ( ಮುಖ್ಯವಾಗಿ ಪಿ. ಯು. ಸಿ .ಅಂಕಗಳ ಆಧಾರ ) ಕಾಲ್ ಲೆಟರ್ ಕಳುಹಿಸಲಾಗುವುದು. ಅಂತಹವರು ಮಾತ್ರ ಪರೀಕ್ಷೆಗೆ ಹಾಜರಾಗಬಹುದು.
- ಪಿ. ಯು. ಸಿ. ಕನಿಸ್ಟ ವಿದ್ಯಾರ್ಹತೆಯಾಗಿದ್ದು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯುಳ್ಳವರು ಕೂಡ ಅರ್ಜಿ ಸಲ್ಲಿಸಬಹುದು. ( ಆದರೆ ವಯಸ್ಸಿನ ಅರ್ಹತೆಯನ್ನು ಪರಿಪೂರ್ಣಗೊಳಿಸಿರಬೇಕು )
- ಕಂಪ್ಯೂಟರ್ ಪರೀಕ್ಷೆ ಯು , ಡಾಟಾ ಎಂಟ್ರಿ ಹಾಗು ಪ್ರಬಂಧ ಟೈಪಿಸುವುದನ್ನು ಒಳಗೊಂಡಿರುತ್ತೆ. ಇಲ್ಲಿ ಸಮಯದ ಪರಿಪಾಲನೆ ಮುಖ್ಯವಾದುದು.
- ಈ ಕೆಲಸವು ಕ್ಲರಿಕಲ್ ಗ್ರೇಡ್ ನದ್ದಾಗಿದು ಆಕರ್ಷಕ ಸಂಬಳ ವಿರುತ್ತದೆ.
- ಇದು ಕೇಂದ್ರ ಸರ್ಕಾರಿ ನೌಕರಿ ಯಾಗಿದ್ದು, 6 ನೇ ವೇತನ ಆಯೋಗದ ಅನ್ವಯ ಕೆಲಸಗಾರರಿಗೆ ಹಲವು ಅನುಕೂಲವಿರುತ್ತದೆ.
- ಅರ್ಜಿ ಶುಲ್ಕ , ಪೋಸ್ಟೆಜ್ ಶುಲ್ಕ ಬಿಟ್ಟರೆ ಯಾವುದೇ ರೀತಿಯ ಲಂಚ /ವಗೈರೆ ಗಳನ್ನು ಯಾರಿಗೂ ಕೊಡಬೇಕಾಗಿಲ್ಲ .
ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಿ. ಆಗಸ್ಟ್ 20 ,2010 ರ ಪ್ರಜಾವಾಣಿ ಪತ್ರಿಕೆ 7 ನೇ ಪುಟ ನೋಡಿ.
ಅಂಚೆ ಇಲಾಖೆಯು ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಸೇವಾ ಸಂಘಟನೆ ಯಾಗಿದ್ದು , ಪ್ರತಿಭಾವಂತರಿಗೆ , ಸೇವಾ ಮನೋಭಾವ ವುಳ್ಳವರಿಗೆ ಸೂಕ್ತ ವೇದಿಕೆ ಯಾಗಿದೆ. ಪ್ರತಿಭಾವಂತ ಕನ್ನಡಿಗರು ಇದರ ಅನುಕೂಲ ಪಡೆದುಕೊಳ್ಳಬೇಕೆಂಬುದೇ ನಮ್ಮ ಸಂಸ್ಥೆಯ ಆಶಯ. ನಿಮ್ಮ ಯಾತ್ರೆಗೆ ಶುಭವಾಗಲಿ.
*ಚುಕ್ಕಿ ಸಂಸ್ಥೆ (ರೀ) ,ಮೈಸೂರು - 571105*