ಅಂತರ್ಜಾಲದಲ್ಲಿ ಹಲವಾರು ಬಗೆಯ ವಸ್ತು ವಿಷಯಗಳ, ವಿಭಿನ್ನ ದೃಷ್ಟಿ ಕೋನಗಳ ಹಲವಾರು ಕನ್ನಡ ಭಾಷೆಯ ತಾಣಗಳಿರುವುದು ನಿಜಕ್ಕೂ ಸಂತಸದ, ಕನ್ನಡ ಸ್ವಾಭಿಮಾನದ, ಹೆಮ್ಮಯ ವಿಷಯ. ಈ ನಿಟ್ಟಿನಲ್ಲಿ ಹಲವಾರು ಕನ್ನಡ ಮನಸ್ಸುಗಳು ಕನ್ನಡಿಗರನ್ನು ಬೆಸೆಯಲು, ಕನ್ನಡವನ್ನು ಪಸರಿಸಲು ಬಹಳಷ್ಟು ಶ್ರಮಪಡುತ್ತಿದ್ದಾರೆ.
ಆದರೆ ಅಂತರ್ಜಾಲದಲ್ಲಿ, ನಾಗರಿಕ ಸೇವಾ ಪರೀಕ್ಷೆಗಳನ್ನು( CIVIL SERVICE EXAMS - KPSC/UPSE/ETC.,) ತೆಗೆದುಕೊಳ್ಳುವವರಿಗೆ ಮಾಹಿತಿ/ಮಾರ್ಗದರ್ಶನ /ಅಧ್ಯಯನ ಸಾಮಾಗ್ರಿ /ಆಪ್ತ ಸಮಾಲೋಚನೆ ಗಾಗಿ ನಿರ್ದಿಸ್ಟ ಕನ್ನಡ ವೆಬ್ ತಾಣ ಅಥವಾ ಬ್ಲಾಗ್ ಗಳಿಲ್ಲ. ಆದರೆ ವೆಬ್ ಸರ್ಚ್ ನಲ್ಲಿ ಈ ಬಗ್ಗೆ ಹುಡುಕಿದರೆ ಆಂಗ್ಲ ಭಾಷೆಯಲ್ಲಿ ಹಲವಾರು ವೆಬ್ ತಾಣಗಳು ತೆರೆದುಕೊಳ್ಳುತ್ತವೆ.
ಹಾಗಾಗಿಯೇ ಈ ಕೊರತೆಯನ್ನು ನಿವಾರಿಸಲು "ಗ್ರಾಮೀಣಾಭಿವ್ರುದ್ದಿ ,ಯುವಶಕ್ತಿ ,ಶಿಕ್ಷಣ " ವೆಂಬ ಮೂಲ ಮಂತ್ರ ಗಳನ್ನೊಳಗೊಂಡ "ಚುಕ್ಕಿ ಸಂಸ್ಥೆ" ಯ ವತಿಯಿಂದ ಕನ್ನಡ ಸ್ಪರ್ಧಾರ್ತಿ ,ಜ್ಞಾನಾರ್ಥಿ ಗಳಿಗಾಗಿ " ಕನ್ನಡ ಸ್ಪರ್ಧಾಯೋಧರು" ಎಂಬ ಸ್ವಾಭಿಮಾನದ ,ಕನ್ನಡತನದ ಬ್ಲಾಗ್ ನ್ನು ಕನ್ನಡಿಗರಿಗಾಗಿ ನಿರ್ಮಿಸಿದ್ದೇವೆ. ಹೆಚ್ಚಾಗಿ ಗ್ರಾಮೀಣ ಭಾಗದ ಸ್ಪರ್ಧಾರ್ತಿ ಗಳಿಗೆ ಹಾಗು ಎಲ್ಲಾ ಕನ್ನಡಿಗರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಬ್ಲಾಗ್ ನಿರ್ಮಾಣವಾಗಿದೆ.
ಜಗತ್ತಿನಲ್ಲಿ, ಬದುಕಿನಲ್ಲಿ ಯಾವುದೂ ಅಸಾದ್ಯವಲ್ಲ. ಅದನ್ನು ಭಾರತೀಯರು, ಕನ್ನಡಿಗರು ಈಗಾಗಲೇ ಮಾಡಿ ತೋರಿಸಿದ್ದಾರೆ. ಕನ್ನಡಿಗರು ಮತ್ತಸ್ಟು, ಮಗದಷ್ಟು ಸಾಧನೆಗಳನ್ನು ಮಾಡಲು , ಅವರ ಸಾಧನೆಯ ಹಾದಿಯಲ್ಲಿ ಒಬ್ಬ ನಿಜವಾದ ಗೆಳೆಯ ಈ ಚುಕ್ಕಿ ಸಂಸ್ಥೆ. ಈ ವಿಷಯಕ್ಕೆ ಸಂಬಂದಿಸಿದಂತೆ, ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu@gmail.com ಗೆ ಕಳುಹಿಸಿ.
ಈ ವೆಬ್ ತಾಣವನ್ನು ಎಲ್ಲ ಕನ್ನಡಿಗರಿಗೂ ಪರಿಚಯಿಸಿ..... ***
ಅವರ ಸಾಧನೆಯ ಹಾದಿಯಲ್ಲಿ ನೀವು ಒಂದು ಚುಕ್ಕಿಯಾಗಿ. ............. ***
ಇದು ಕನ್ನಡಿಗರ ಬ್ಲಾಗ್..........
ಕನ್ನಡ ಸ್ಪರ್ಧಾಯೋಧರಿಗಾಗಿ ಇರುವ ಬ್ಲಾಗ್. .............
ಕನ್ನಡಿಗರ ಶಕ್ತಿ/ಸಾಮರ್ಥ್ಯಕ್ಕೆ ದಿಕ್ಸೂಚಿಯಾಗುವಂತಹ ಬ್ಲಾಗ್...........
ನಿಮ್ಮ ಅಮೂಲ್ಯ ಸಲಹೆಗಳಿಗೆ ಸ್ವಾಗತ.
ಚುಕ್ಕಿ....
ಬಿಂದುವಿನಿಂದ ಅನಂತದೆಡೆಗೆ....
PLEASE VISIT- http://kannadaspardayodharu.blogspot.com
ನಿಮ್ಮ ಅಮೂಲ್ಯ ಸಲಹೆಗಳಿಗೆ ಸ್ವಾಗತ.
ಚುಕ್ಕಿ....
ಬಿಂದುವಿನಿಂದ ಅನಂತದೆಡೆಗೆ....
PLEASE VISIT- http://kannadaspardayodharu.blogspot.com