Thursday, June 24, 2010

" ಉದ್ಯೋಗ ಮೇಳ" (JOB MELA AT HUNSUR TOWN, MYSORE DIST ON 3RD JULY 2010 1

ಪ್ರೀತಿಯ ಬಂದುಗಳೇ ನಮಸ್ಕಾರ ,

ನಮ್ಮ ಹೆಮ್ಮೆಯ ಭರತ ಭೂಮಿಯ ಮೂಲ ಬೇರುಗಳು ಹಳ್ಳಿ ಗಳಲ್ಲಿವೆ. ಗ್ರಾಮೀಣ ಭಾರತವೇ , ನಿಜವಾದ ಭಾರತ. ಜಾಗತೀಕರಣ, ಉದಾರೀಕರಣ , ಖಾಸಗೀಕರಣ ಗಳೇ ಜೀವಾಳವಾಗಿರುವ ಈ ಸ್ಪರ್ದಾತ್ಮಕ ಜಗತ್ತಿನಲ್ಲಿ , ಸದೃಢ ಬಾರತವನ್ನ ಕಟ್ಟುವ ಹೊಣೆಗಾರಿಕೆ ಅದಮ್ಯ ಶಕ್ತಿ, ಕನಸು ಗಳನ್ನ ಹೊಂದಿರುವ ಯುವ ಸಮುದಾಯದ್ದು. ಅದರಲ್ಲೂ ಗ್ರಾಮೀಣ ಭಾರತದ ಯುವ ಸಮುದಾಯ ಜಾಗೃತರಾದರೆ , ಜೈ ಭಾರತ ಮಾತೆ ಸದಾ "ಜೈ ಹೋ ". ಈ ನಿಟ್ಟಿನಲ್ಲಿ ನಮ್ಮ ಚುಕ್ಕಿ ಸಂಸ್ಥೆ ಯ ಕನಸುಗಳು ನಿಮಗೆ ತಿಳಿದಿರುವ ವಿಚಾರವೇ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಸಮಾನ ಮನಸ್ಕ ಸಂಸ್ಥೆ ಗಳೊಟ್ಟಿಗೆ ಚುಕ್ಕಿ ಸಂಸ್ಥೆ ಸದಾ ಇರುತ್ತದೆ.


ನಮ್ಮೂರಿನವರೇ ಆದ ನಮ್ಮ ಕಿರಿಯ ಮಿತ್ರ ಶ್ರೀ ಅರುಣ್ ಹಾಗು ಗೆಳೆಯರು ಗ್ರಾಮೀಣ ಯುವ ಮಿತ್ರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು " ಉದ್ಯೋಗ ಮೇಳ" ವನ್ನು ಆಯೋಜಿಸಿದ್ದಾರೆ.


ದಿನಾಂಕ 3/07/2010 ರಂದು ಹುಣಸೂರಿನ ಅಂಬೇಡ್ಕರ್ ಭವನ ದಲ್ಲಿ ಹಲವಾರು ಖಾಸಗಿ ಸಂಸ್ಥೆ /ಕಂಪನಿ ಗಳು ಉದ್ಯೋಗದ ಅಕ್ಷಯ ಪಾತ್ರೆ ಹಿಡಿದು ಪ್ರತಿಬಾವಂತ ಯುವಕ/ಯುವತಿ ಯಾರಿಗಾಗಿ ಒಂದೇ ಸೂರಿನಡಿ ಬರುತ್ತಿದ್ದಾರೆ.


WIPRO,SPI,DMS TECHNOLOGIES,HTMT,KANVA GROUPS,TEJASWINI ENTERPISE ಇತ್ಯಾದಿ .


ನಿಮ್ಮಲ್ಲಿರಬೇಕಾದ ವಿದ್ದ್ಯಾರ್ಹತೆ : SSLC,PUC,ITI,JOC,DIPLOMA,DEGREE,HARDWARE AND NETWORKING .


ಸಾವಿರಕ್ಕೂ ಹೆಚ್ಚಿನ ಉದ್ಯೋಗವಕಾಶಗಳಿವೆ . ಎಲ್ಲ ಸನ್ಮಿತ್ರರು ಈ ಮೇಳದ ಪ್ರಯೋಜನ ಪಡೆದುಕೊಳ್ಳಿ. ಅಗತ್ಯ ಇರುವವರಿಗೆ ತಿಳಿಸಿ.
ಹೆಚ್ಚಿನ ಮಾಹಿತಿಗೆ ,


* ARUN : 9742726689 eMAIL : hp.arun87@gmail.com
* SACHIN PRAKASH: 9980440444 E mAIL: hunsurnews@gmail.com
ರವರನ್ನು ಸಂಪರ್ಕಿಸಿ.


ಅತಿ ಹೆಚ್ಚಿನ ಕನ್ನಡ ಬಂದು ಗಳು ಇದರ ಅನೂಕೂಲ ಪಡೆದು ಕೊಳ್ಳಬೇಕೆಂಬುದೇ ನಮ್ಮ ಅಭಿಲಾಷೆ .


ವಂದನೆಗಳೊಂದಿಗೆ,


ತಮ್ಮ ಪ್ರೀತಿಯ,


ಲಿಂಗೆಶ್ ಹುಣಸೂರು .
ಬಿಂದುವಿನಿಂದ ಅನಂತದೆಡೆಗೆ..
ಕನ್ನಡ ಉಸಿರಾಗಲಿ , ಕರುನಾಡು ಹಸಿರಾಗಲಿ..

******************************
ಒಮ್ಮೆ ಬಿಡುವು ಮಾಡಿಕೊಂಡು ಬೇಟಿ ನೀಡಿ :
http://chukkisamsthe.blogspot.com
ಮಿಂಚೆ : chukkisamsthe@gmail.com
********************************

Sunday, October 26, 2008

ಮೊದಲ ಮಾತು ...

ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.
ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ. ಈ ಉತ್ತಮ ಕೊಡುಗೆ ಎಂದರೆ "ನಿಸ್ವಾರ್ಥ ಸೇವೆ". ನಿಸ್ವಾರ್ಥ ಸೇವೆಯ ಮೂಲಕ "ಗ್ರಾಮೀಣಾಭಿವ್ರುದ್ದಿ ". ಅದರ ಮೂಲಕ "ಭಾರತದ ಅಭಿವೃದ್ದಿ". ಅದರೊಟ್ಟಿಗೆ ಸಮಾಜದ ಸರ್ವತೋಮುಖ ಬೆಳವಣಿಗೆ ನಮ್ಮ ಧ್ಯೇಯ.

ಇದು ಶ್ರೀಮಂತರ, ಸಮಯಸಾಧಕರ, ಮತೀಯವಾದಿಗಳ, ಸ್ವಾರ್ಥ ಸಾಧಕರ ಸಂಸ್ಥೆಯಲ್ಲ. ಬದಲಾಗಿ ಬದುಕಿನ ಕಷ್ಟಗಳನ್ನೆದುರಿಸಿ , ಸಾಧನೆಯ ಕನಸು ಹೊತ್ತು, ಸಾಗಿ, ಅಲ್ಪಮಟ್ಟಿನ ಯಶಸ್ಸು ಕಂಡು, ಇನ್ನೂ ಸಾಧಿಸಬೇಕೆನ್ನುವ ಉತ್ಸಾಹದ ಒಯಸ್ಸಿಸ್ಸನ್ನಿರಿಸಿಕೊಂಡಿರುವ "ಮಧ್ಯಮ ವರ್ಗದ ಯುವ ಚೇತನಗಳ ಕನಸಿನ ಕೂಸು". ಇಲ್ಲಿರುವುದು ಅಮಿತ ಉತ್ಸಾಹ, ಅಸಾಧಾರಣ ಜ್ಞಾನ ಸಂಪತ್ತು, ಬದುಕು ಸವೆಸಲು ಕಷ್ಟವಾದ ಮಂದಿಗೆ ಒಂದಸ್ಟು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ. ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.

"ಚುಕ್ಕಿ ಸಂಸ್ಥೆ " , ಸುಂದರ ಬದುಕು ಕಟ್ಟಿ ಕೊಳ್ಳಲು ನಿಜವಾದ ಗೆಳೆಯ.

Tuesday, October 21, 2008

ಬೆಳಗಿಸೋಣ ಚುಕ್ಕಿಯ.....

ನಮಸ್ತೆ ಬಂಧುಗಳೇ,
"ಗ್ರಾಮೀಣಾ ಭಿವ್ರುದ್ದಿ ಯ ಮೂಲಕ ನವ ಭಾರತ ನಿರ್ಮಾಣ" da ಕನಸು ಹೊತ್ತುಕೊಂಡು ಹುಟ್ಟಿ ಕೊಂಡಿರೋ ಸಮಾನ ಮನಸ್ಕ ಯುವ ಮನಸ್ಸುಗಳ ಸಮಾಜಮುಖಿ ಸೇವಾ ಸಂಸ್ಥೆ "ಚುಕ್ಕಿ". ಅದಮ್ಯ ಕನಸುಗಾರ ಲಿಂಗೆಶ್ ಹುಣಸೂರ್ ಈ ಸಂಸ್ಥೆಯ ಸಂಸ್ಥಾಪಕರು. "ಸೇವೆ, ಶಿಕ್ಷಣ, ಜಾಗೃತಿ, ಅಭಿವೃದ್ದಿ " ಈ ಸಂಸ್ಥೆಯ ಮೂಲ ಮಂತ್ರಗಳು.

Saturday, May 3, 2008

ಕಾರ್ಯಾಲಯ ವಿಳಾಸ...Official Address

ನಮ್ಮ ಸಂಸ್ಥೆಯ ಮಹಾ ಕಾರ್ಯಾಲಯ... our office

ಚುಕ್ಕಿ ಸಂಸ್ಥೆ.
(REG NO:MYS - S 47- 2008/09)
# 24 41 , ಗೋಕುಲ ಬಡಾವಣೆ,
ಹುಣಸೂರು , ಮೈಸೂರು ಜಿಲ್ಲೆ,
ಕರ್ನಾಟಕ - 571 105 .

ದೂರವಾಣಿ : Telephone No:

9341410413

9964438393

ಈ ಅಂಚೆ: E-MAIL

chukkisamsthe@gmail.com

ಅಂತರ್ಜಾಲ ತಾಣ: Web Address

http://chukkisamsthe.blogspot.com


OUR MAIN OFFICE

CHUKKI SAMSTHE(r)
#2441,Gokula Extn.,
Hunsur Town, Mysore dist.,
Karnataka - 571105

ಕಾರ್ಯಕಾರಿ ಸಮಿತಿ...

ಕಾರ್ಯಕಾರಿ ಸಮಿತಿ ಸದಸ್ಯರು

1 . ಗೌರವಾದ್ಯಕ್ಷರು ------ ಪ್ರೊ. ಮೋಹನ್ ಶರ್ಮ (MA.B.Ed)

ದೂ : 9341149049

2. ಅದ್ಯಕ್ಷರು -------- ನಂದೀಶ್ ಕೆ. ಸಿ. (BSc , B.Ed)

ದೂ : 996468523033

3. ಉಪಾದ್ಯಕ್ಷರು ------ ಲಕ್ಷ್ಮಿಕಾಂತ್ (MA,Tch,BEd)

ದೂ : 9480057205

4. ಪ್ರಧಾನ ಕಾರ್ಯದರ್ಶಿ---- ಯೋಗಿಶ್ ಪ್ರಭು (MA. , MBA )

ದೂ : 99004510765

5. ಸಹ ಕಾರ್ಯದರ್ಶಿ----- ಸಿ . ಎನ್. ಗೋಪಾಲ್ ಗೌಡ್ರು (MA,M.Phil,B.Ed)

ದೂ : 9945374949

6. ಸಂಘಟನ ಕಾರ್ಯದರ್ಶಿ ----- ಮಧುಸೂಧನ್ ಎಸ್ .ಕೆ. (MA)

ದೂ : 998602807

7. ಖಜಾಂಚಿ ------- ರವಿಪ್ರಸಾದ್ ಕೆ. (M.Sc., M.Ed.,)

ದೂ : 9844775616

ಸದಸ್ಯತ್ವ.....

  • ಈ ಸಂಸ್ಥೆಯ ಸದಸ್ಯರಾಗಬಯಸುವವರು 18 ವರ್ಷಕ್ಕೆ ಮೆಲಿನವರಾಗಿರಬೇಕು.
  • ಸಂಸ್ಥೆಯ ಉದ್ದೇಶಗಳನ್ನು ಗೌರವಿಸುವನ್ತವರಾಗಿರಬೇಕು.
  • ಸ್ವಯಂ ವಿವರಗಳನ್ನೋಳಗೊಂಡ ಅರ್ಜಿಯನ್ನು ಬರ್ತಿ ಮಾಡಿ , 2 ಭಾವಚಿತ್ರಗಲೋಟ್ಟಿಗೆ,ಗೊತ್ತು ಮಾಡಿದ ಫಿ(ಶುಲ್ಕ) ವನ್ನು ಪಾವತಿ ಮಾಡಿ ಸಂಸ್ಥೆಯ ಸದಸ್ಯತ್ವ ವನ್ನು ಪಡೆದುಕೊಳ್ಳುವುದು.
  • ಈ ಸಂಸ್ಥೆಯ ಸದ್ಸ್ಯರಾಗುವವರು , ಜಾತ್ಯಾತೀತ ,ಪಕ್ಷಾತೀತ , ನಿಲುವನ್ನಿಟ್ಟುಕೊಂಡಿದ್ದು , ಸಾಮಾಜಿಕ ಕಳಕಳಿ ಹೊಂದಿರಬೇಕು.
  • ಪ್ರಾರಮ್ಬಿಕ ಸದಸ್ಯತ್ವ ಶುಲ್ಕ ರೂ 1,000 (ಒಂದು ಸಾವಿರ ರೂಪಾಯಿಗಳು).
  • ಪ್ರತಿ ಮಾಹೆ , ಆದಾಯದ ಶೇ 1 (ಒಂದು) ರಸ್ತು ಹಣವನ್ನ ಸಂಸ್ಥೆಗೆ ನೀಡುವುದು.
  • ಸಂಸ್ಥೆಯ ವತಿಯಿಂದ ಸದಸ್ಯರಿಗೆ "ಗುರುತಿನ ಪತ್ರ" ನೀಡಲಾಗುವುದು.
  • ಸದಸ್ಯರ ಹಿತ, ಯೋಗಕ್ಷೇಮವನ್ನು ಸಂಸ್ಥೆಯು ನೋಡಿಕೊಳ್ಳುವುದು.

Wednesday, April 30, 2008

ಚುಕ್ಕಿ...ಬದುಕು ಬೆಳಕಾಗಿಸುವ ಕಲ್ಪವಲ್ಲಿ....

ಪ್ರೀತಿಯ ಬಂದುಗಳೇ.....

" ಚುಕ್ಕಿ ಸಂಸ್ಥೆ "ಗೆ , ಪ್ರತಿ ದಿನ, ಪ್ರತಿ ಕ್ಷಣ ಹೊಸ ಹೊಸ ಚುಕ್ಕಿಗಳು ಸೇರ್ಪಡೆಯಾಗುತ್ತಿದ್ದಾರೆ....ಇದು ಸಂತೋಷದ ವಿಷಯ....ಸಮಾಜದಲ್ಲಿ ಆರೋಗ್ಯಕರ ಬದಲಾವನೆಯನ್ನ, ಸುದಾರಣೆಯನ್ನ ತರಲು ಹೊರಟಿರುವ ನಮ್ಮ ತೋಳುಗಳಿಗೆ ನಿಮ್ಮ ಸೇರ್ಪಡೆ ನೂರ ಆನೆಯ ಬಲವನ್ನ ತಂದಂತಾಗಿದೆ....ನಿಮ್ಮ ಸಮಾಜಮುಕಿ ನಿಲುವಿಗೆ, ಸೇವಾ ಮನಸ್ಸಿಗೆ ನಮ್ಮ ಕೋಟಿ ಕೋಟಿ ಅನಂತ ನಮನಗಳು ಹಾಗು ಧನ್ಯವಾದಗಳು.

ಸಾಮಾಜಿಕವಾಗಿ ಹಾಗು ಸಾಂಸ್ಕೃತಿಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಲು, ಸಾಂಘಿಕ ಶಕ್ತಿಯಲ್ಲಿ ನಂಬಿಕೆ ಇರಿಸಿದ ಯುವ ಸಮಾನ ಮನಸ್ಸುಗಳು " ಕರ್ನಾಟಕ ಸಂಘ - ಸಂಸ್ಥೆ ಗಳ ಕಾಯಿದೆ , ೧೯೬೦ ರ ರೀತ್ಯಾ " ಚುಕ್ಕಿ ಸಂಸ್ಥೆ" ಯನ್ನು ರಚಿಸಲಾಗಿದೆ...ಹಾಗು...ಇದನ್ನು " ಜಿಲ್ಲಾ ನೋಂದಣಿ ಅಧಿಕಾರಿಗಳು, ಸಂಘ -ಸಂಸ್ಥೆ ಗಳ ನೋಂದಣಿ ಇಲಾಕೆ,ಮೈಸೂರು ಜಿಲ್ಲೆ, ಮೈಸೂರು" ಇಲ್ಲಿ ನೊಂದಾಯಿಸಲಾಗಿದೆ....REG NO: MYS - S 47 - 2008/09.

ಪ್ರಾರಂಭಿಕ ಹಂತದಲ್ಲಿ ಈ ಸಂಸ್ಥೆಯ ಕಾರ್ಯ ವ್ಯಾಪ್ತಿ ಮೈಸೂರು ನಗರ ಹಾಗು ಜಿಲ್ಲೆ ಯನ್ನು , ಒಳಗೊಂಡಿದ್ದು ನಂತರದ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ಥರಿಸಲಾಗುವುದು....ಆದರೆ ನಮ್ಮ ಸೇವಾ ಮನಸ್ಸುಗಳಿಗೆ ಯಾವುದೇ ಗಡಿಯ ಹಂಗಿಲ್ಲ....ರಾಜ್ಯದ ಎಲ್ಲ ಭಾಗಳಲ್ಲಿ ಈ ಸಂಸ್ಥೆಯ ಸದಸ್ಯರಿರುವುದು, ಸಂಸ್ಥೆಯ ಹೆಮ್ಮೆ.

ಪ್ರೀತಿಯ ಬಂಧುಗಳೇ, ಮತ್ತೊಮ್ಮೆ ಸಂಸ್ಥೆಗೆ ಹೃದಯಪೂರ್ವಕ ಸ್ವಾಗತ ಕೋರುತ್ತ, ತಮ್ಮನ್ನ ಅಭಿನಂದಿಸುತ್ತೇನೆ.....ಅಂತರ್ಜಾಲದಲ್ಲಿ , ನಿಮ್ಮ ಸುತ್ತ ಮುತ್ತಲಿನಲ್ಲಿ ಸೇವಾ ಮನಸ್ಸು ಹೊಂದಿರುವ ನಿಮ್ಮ ಆತ್ಮಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ...ಎಲ್ಲ ಚುಕ್ಕಿಗಳು ಒಟ್ಟಿಗೆ ಸೇರಿದರೆ , ಜಗತ್ತಿಗೆ ಬೆಳಕು ನೀದಬಹುದಲ್ವಾ....ಸಾಂಘಿಕ ಶಕ್ತಿ ಸದಾ ಜೀವಂತವಾಗಿರಲಿ.....

ಪ್ರೀತಿಯಿಂದ...
ಚುಕ್ಕಿ...
ಬಿಂದುವಿನಿಂದ ಅನಂತ ದೆಡೆಗೆ ................
HELLO: 9964438393
E-MAIL: lingeshkc9@gmail.com
Address: LINGESH K C
POSTAL ASST.,
DEVANAHALLI POST OFFICE,
BANGALORE(R) DIST,
KARNATAKA - 562 110

*************** ಶುಭ ಮಸ್ತು ********************

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......