Wednesday, April 30, 2008

ಚುಕ್ಕಿ...ಬದುಕು ಬೆಳಕಾಗಿಸುವ ಕಲ್ಪವಲ್ಲಿ....

ಪ್ರೀತಿಯ ಬಂದುಗಳೇ.....

" ಚುಕ್ಕಿ ಸಂಸ್ಥೆ "ಗೆ , ಪ್ರತಿ ದಿನ, ಪ್ರತಿ ಕ್ಷಣ ಹೊಸ ಹೊಸ ಚುಕ್ಕಿಗಳು ಸೇರ್ಪಡೆಯಾಗುತ್ತಿದ್ದಾರೆ....ಇದು ಸಂತೋಷದ ವಿಷಯ....ಸಮಾಜದಲ್ಲಿ ಆರೋಗ್ಯಕರ ಬದಲಾವನೆಯನ್ನ, ಸುದಾರಣೆಯನ್ನ ತರಲು ಹೊರಟಿರುವ ನಮ್ಮ ತೋಳುಗಳಿಗೆ ನಿಮ್ಮ ಸೇರ್ಪಡೆ ನೂರ ಆನೆಯ ಬಲವನ್ನ ತಂದಂತಾಗಿದೆ....ನಿಮ್ಮ ಸಮಾಜಮುಕಿ ನಿಲುವಿಗೆ, ಸೇವಾ ಮನಸ್ಸಿಗೆ ನಮ್ಮ ಕೋಟಿ ಕೋಟಿ ಅನಂತ ನಮನಗಳು ಹಾಗು ಧನ್ಯವಾದಗಳು.

ಸಾಮಾಜಿಕವಾಗಿ ಹಾಗು ಸಾಂಸ್ಕೃತಿಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಲು, ಸಾಂಘಿಕ ಶಕ್ತಿಯಲ್ಲಿ ನಂಬಿಕೆ ಇರಿಸಿದ ಯುವ ಸಮಾನ ಮನಸ್ಸುಗಳು " ಕರ್ನಾಟಕ ಸಂಘ - ಸಂಸ್ಥೆ ಗಳ ಕಾಯಿದೆ , ೧೯೬೦ ರ ರೀತ್ಯಾ " ಚುಕ್ಕಿ ಸಂಸ್ಥೆ" ಯನ್ನು ರಚಿಸಲಾಗಿದೆ...ಹಾಗು...ಇದನ್ನು " ಜಿಲ್ಲಾ ನೋಂದಣಿ ಅಧಿಕಾರಿಗಳು, ಸಂಘ -ಸಂಸ್ಥೆ ಗಳ ನೋಂದಣಿ ಇಲಾಕೆ,ಮೈಸೂರು ಜಿಲ್ಲೆ, ಮೈಸೂರು" ಇಲ್ಲಿ ನೊಂದಾಯಿಸಲಾಗಿದೆ....REG NO: MYS - S 47 - 2008/09.

ಪ್ರಾರಂಭಿಕ ಹಂತದಲ್ಲಿ ಈ ಸಂಸ್ಥೆಯ ಕಾರ್ಯ ವ್ಯಾಪ್ತಿ ಮೈಸೂರು ನಗರ ಹಾಗು ಜಿಲ್ಲೆ ಯನ್ನು , ಒಳಗೊಂಡಿದ್ದು ನಂತರದ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ಥರಿಸಲಾಗುವುದು....ಆದರೆ ನಮ್ಮ ಸೇವಾ ಮನಸ್ಸುಗಳಿಗೆ ಯಾವುದೇ ಗಡಿಯ ಹಂಗಿಲ್ಲ....ರಾಜ್ಯದ ಎಲ್ಲ ಭಾಗಳಲ್ಲಿ ಈ ಸಂಸ್ಥೆಯ ಸದಸ್ಯರಿರುವುದು, ಸಂಸ್ಥೆಯ ಹೆಮ್ಮೆ.

ಪ್ರೀತಿಯ ಬಂಧುಗಳೇ, ಮತ್ತೊಮ್ಮೆ ಸಂಸ್ಥೆಗೆ ಹೃದಯಪೂರ್ವಕ ಸ್ವಾಗತ ಕೋರುತ್ತ, ತಮ್ಮನ್ನ ಅಭಿನಂದಿಸುತ್ತೇನೆ.....ಅಂತರ್ಜಾಲದಲ್ಲಿ , ನಿಮ್ಮ ಸುತ್ತ ಮುತ್ತಲಿನಲ್ಲಿ ಸೇವಾ ಮನಸ್ಸು ಹೊಂದಿರುವ ನಿಮ್ಮ ಆತ್ಮಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ...ಎಲ್ಲ ಚುಕ್ಕಿಗಳು ಒಟ್ಟಿಗೆ ಸೇರಿದರೆ , ಜಗತ್ತಿಗೆ ಬೆಳಕು ನೀದಬಹುದಲ್ವಾ....ಸಾಂಘಿಕ ಶಕ್ತಿ ಸದಾ ಜೀವಂತವಾಗಿರಲಿ.....

ಪ್ರೀತಿಯಿಂದ...
ಚುಕ್ಕಿ...
ಬಿಂದುವಿನಿಂದ ಅನಂತ ದೆಡೆಗೆ ................
HELLO: 9964438393
E-MAIL: lingeshkc9@gmail.com
Address: LINGESH K C
POSTAL ASST.,
DEVANAHALLI POST OFFICE,
BANGALORE(R) DIST,
KARNATAKA - 562 110

*************** ಶುಭ ಮಸ್ತು ********************

Sunday, April 27, 2008

ವಿವೇಕ ವಾಣಿ...

ಆತ್ಮಿಯರೇ...ಒಂದು ನಿಮಿಷ ಸ್ವಾಮಿ ವಿವೇಕಾನಂದರ ಈ ವಾಕ್ಯಗಳನ್ನ ಗಮನಿಸಿ....ನಿಮ್ಮಿಂದ ಏನಾದ್ರು ಮಾಡ್ಲಿಕ್ಕೆ ಸಾದ್ಯ ಅಂತ ಒಪ್ಪಿಕೊಲ್ಲೋದಾದ್ರೆ....ನಮಗೊಂದು ಕರೆ ಮಾಡಿ....9902559954

" ಐಶ್ವರ್ಯ ಹೀನರಾದ, ನಿರ್ಭಗ್ಯರಾದ, ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ, ಕಾದಡಿ ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಯೇಳುವರೆಂದು ನಾನು ನಂಬುತ್ತೇನೆ..ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆಯಲ್ಲವನ್ನು ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ ಪದುವರೋ , ಆಗ ಮಾತ್ರ ಭಾರತ ಕಂಡ ಮೇಲೆ ಏಳುವುದು"
------------------------------------ಸ್ವಾಮಿ ವಿವೇಕಾನಂದರು------------------------------

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......