Monday, September 27, 2010

ಭಗತ್ ಸಿಂಗ್ ರ ೧೦೩ ನೇ ಜನ್ಮ ದಿನದ ವಾರ್ಷಿಕೋತ್ಸವ



ಇಂದು ಹಿಂದೂಸ್ಥಾನವು ಎಂದೂ ಮರೆಯದ ವೀರ ಯೋಧ , ಭರತ ದೇಶದ ಆಂಗ್ಲರ ದಾಸ್ಯ ಸಂಕೋಲೆಯನ್ನು ಕಿತ್ತೊಗೆಯಲು ಹೋರಾಡಿದ ಮಹಾನ್ ಕ್ರಾಂತಿಕಾರಿ " ಶಾಹಿದ್ ಭಗತ್ ಸಿಂಗ್ " ರ ೧೦೩ ನೇ ಜನ್ಮ ದಿನದ ವಾರ್ಷಿಕೋತ್ಸವ . ಭಗತ್ ಸಿಂಗ್ ಅವರು ಸೆಪ್ಟೆಂಬರ್ ೨೭,  ೧೯೦೭ರಲ್ಲಿ ಪಂಜಾಬ್ನ ಲಾಯಲ್ ಪುರ ಜಿಲ್ಲೆಯ ಬಾಂಗಾ ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಜನಿಸಿದರು. ತಾರುಣ್ಯ ದಲ್ಲಿಯೇ ಅಪಾರ ದೇಶಭಕ್ತಿ ಬೆಳೆಸಿಕೊಂಡಿದ್ದ ಭಗತ್ ಸಿಂಗ್  , ಹಲವಾರು ಕ್ರಾಂತಿಕಾರಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು .

ಗಾಂಧೀಜಿಯವರ ತತ್ವ ಸಿದ್ದಾಂತಗಳಿಗೆ ವಿರುದ್ದವಾಗಿದ್ದ ಭಗತ್ ಕಮ್ಯುನಿಸಂ ಕಡೆ ಆಕರ್ಷಿತರಾಗಿದ್ದರು. ಮಾರ್ಕ್ಸಿಸಂ ನಿಂದಲೂ ಕೂಡ ಪ್ರಭಾವಿತರಾಗಿದ್ದರು. ಸಂಪೂರ್ಣ ನಾಸ್ತಿಕ, ಜಾತಿ ವಿರೋದಿ ಯಾಗಿದ್ದ ಭಗತ್ ಸಿಂಗ್ ಹಲವಾರು ಯುವ ಭಾರತೀಯರಿಗೆ ಸ್ವಾತಂತ್ರಕ್ಕಾಗಿ ಹೋರಾಡಲು ಸ್ಪೂರ್ತಿ ಯಾಗಿದ್ದರು. ೨೩ ಮಾರ್ಚ್ ೧೯೩೧ ರಂದು ದೇಶಕ್ಕಾಗಿ ತಮ್ಮ ಕೊನೆಯುಸಿರೆಳೆದರು. 

ಒಟ್ಟಿನಲ್ಲಿ

 "ಭಗತ್ ಎಂದರೆ
ಬೆಂಕಿಯ ಚೆಂಡು, ಆಂಗ್ಲರ ವಿರುದ್ದ ಸಿಡಿದೆದ್ದ ಗಂಡು " .

ಇಂದು ಅವರ ಜನ್ಮ ವಾರ್ಷಿಕೋತ್ಸವ , ಅವರ ವೀರನಡೆಯನ್ನು ಸ್ಮರಿಸೋಣ. ದೇಶಭಕ್ತಿಯನ್ನು ಶ್ಲಾಘಿಸೋಣ.

 
"Inquilab Zindabad" (Long live the revolution)


No comments:

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......