Friday, November 18, 2011

"ಸ್ಪರ್ಧಾ ಮಿತ್ರ " ವತಿಯಿಂದ KAS/IAS ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ದಿನಾಂಕ 12 /02 /2012 ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ

ಎಲ್ಲ ಕನ್ನಡ ಬಂಧುಗಳಿಗೆ ನಮಸ್ತೆ,


ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದು ಸ್ಪರ್ದಾತ್ಮಕ ಯುಗ, ಕ್ಷಣ ಕ್ಷಣಕ್ಕೂ ಸ್ಪರ್ಧೆ ...???!!!

ಸ್ಪರ್ಧಾ ಪ್ರಪಂಚದಲ್ಲಿ ಎಂಟೆದೆಯ ಭಂಟರಾದ ಕನ್ನಡಿಗರು ಮುನ್ನುಗ್ಗಿ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಹಡೆದ ತಂದೆತಾಯಿಗಳಿಗೆ, ಜನ್ಮ ಕೊಟ್ಟ ಈ ಕರುನಾಡಿಗೆ ಕೀರ್ತಿ ತರಬೇಕೆಂಬುದೆ "ಚುಕ್ಕಿ ಸಂಸ್ಥೆ"  ಯ ಆಶಯ.

ಯಾವುದೇ ಪರೀಕ್ಷೆಗೆ ಸಿದ್ದರಾಗಬೇಕಾದರೆ  ತರಭೇತಿ ಅವಶ್ಯಕ. ನುರಿತ ವಿಷಯ ಪಾಂಡಿತ್ಯ ಉಳ್ಳ ತರಬೇತುದಾರರಿಂದ ತರಬೇತಿ ಪಡೆದು  , ಅವರ ಮಾರ್ಗದರ್ಶನದ ಜೊತೆಗೆ, ನಿಮ್ಮ ಪರಿಶ್ರಮ, ಛಲ, ಸವಾಲುಗಳನ್ನು ಭೇದಿಸುವ ಎದೆಗಾರಿಕೆ,  ಶ್ರದ್ದೆ   ಇದ್ದರೆ ಸ್ಪರ್ಧಾತ್ಮಕ   ಪರೀಕ್ಷೆಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಸ್ಪರ್ಧಾರ್ತಿ   ಗಳ  ಕನಸುಗಳಿಗೆ ಭರವಸೆ ಮೂಡಿಸುವ , ಅಪಾರ ಪಾಂಡಿತ್ಯ ಹೊಂದಿರುವ , ಸಮಾಜಮುಖಿ, ಸ್ನೇಹಶೀಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರ ಕರುನಾಡ ರಾಜಧಾನಿಯಲ್ಲಿ ಜನ್ಮ ತಾಳಿದೆ.


ಅದುವೇ " ಸ್ಪರ್ಧಾ ಮಿತ್ರ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರ". ವಿಜಯನಗರ ಸಮೀಪವಿರುವ, ಆರ್.ಪಿ.ಸಿ ಲೇಔಟ್ ಬಸ್ ನಿಲ್ದಾಣದ ಸಮೀಪ ಹಂಪಿನಗರ ಅಂಚೆ ಕಚೇರಿ ಗೆ ಹೋಗುವ ರಸ್ತೆಯಲ್ಲಿ, ೮ ನೇ ಮೇನ್ ನ PRAKAASH YOGI INTERNATIONAL FOUNDATION (R) ನ ಕಟ್ಟಡ ಡ ಮೂರನೇ ಮಹಡಿಯಲ್ಲಿ ಜ್ನಾನಾರ್ಥಿಗಳ ಕನಸುಗಳಿಗೆ ಭರವಸೆ ಮೂಡಿಸುವ ಸ್ಪರ್ಧಾ ಮಿತ್ರ , ಎಲ್ಲಾ ಸ್ಪರ್ಧಾರ್ತಿ ಗಳನ್ನು ಕೈ ಬಿಸಿ ಕರೆಯುತ್ತಿದೆ. ಯಾರಿಗೂ ಯಾವುದೇ ರೀತಿಯಲ್ಲಿ ಹೊರೆಯಾಗದ ರೀತಿಯಲ್ಲಿ , ವಿಷಯ ನೈಪುಣ್ಯತೆ ಪಡೆದ ವಿಶೇಷ ಪರಿಣಿತ  ರಿಂದ   ಇಲ್ಲಿ ತರಭೇತಿ ಪಡೆಯಬಹುದಾಗಿದೆ.

ದಿನಾಂಕ 12 /02 /2012  ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ ಸ್ಪರ್ಧಾರ್ತಿಗಳ ಕನಸುಗಳಿಗೆ ಭರವಸೆ ಮೂಡಿಸುವ "ಸ್ಪರ್ಧಾ ಮಿತ್ರ " ವತಿಯಿಂದ  KAS/IAS ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ವನ್ನು ಏರ್ಪಡಿಸಲಾಗಿದೆ. ಹಾಗಾಗಿ ಆಸಕ್ತ ವಿದ್ಯಾರ್ಥಿಗಳು/ಸ್ಪರ್ಧಾರ್ತಿಗಳು ಇದರ ಅನುಕೂಲ ಪಡೆದುಕೊಂಡು ನಾಗರಿಕ ಸೇವೆಗಳ ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂಬುದೇ ನಮ್ಮ ಭಿನ್ನಹ.

ವಿವರಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು  ಸಂಪರ್ಕಿಸಿ.
೦೧: 08023202044
೦೨: 9611396947
೦೩: 8277198744



ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu @ gmail.com ಅಥವಾ chukkisamsthe@ gmail ಮಿಂಚೆ ಗೆ ಕಳುಹಿಸಿ . ಜ್ಞಾನವನ್ನು ಹಂಚಿಕೊಳ್ಳೋಣ, ಮಾಹಿತಿ ತಿಳಿದು ಜಾಗೃತರಾಗೋಣ.

http://kannadaspardayodharu.blogspot.com

ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ ...

--

* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)
+91-9480211007

No comments:

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......