ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ. ಈ ಉತ್ತಮ ಕೊಡುಗೆ ಎಂದರೆ "ನಿಸ್ವಾರ್ಥ ಸೇವೆ". ನಿಸ್ವಾರ್ಥ ಸೇವೆಯ ಮೂಲಕ "ಗ್ರಾಮೀಣಾಭಿವ್ರುದ್ದಿ ". ಅದರ ಮೂಲಕ "ಭಾರತದ ಅಭಿವೃದ್ದಿ". ಅದರೊಟ್ಟಿಗೆ ಸಮಾಜದ ಸರ್ವತೋಮುಖ ಬೆಳವಣಿಗೆ ನಮ್ಮ ಧ್ಯೇಯ.ಇದು ಶ್ರೀಮಂತರ, ಸಮಯಸಾಧಕರ, ಮತೀಯವಾದಿಗಳ, ಸ್ವಾರ್ಥ ಸಾಧಕರ ಸಂಸ್ಥೆಯಲ್ಲ. ಬದಲಾಗಿ ಬದುಕಿನ ಕಷ್ಟಗಳನ್ನೆದುರಿಸಿ , ಸಾಧನೆಯ ಕನಸು ಹೊತ್ತು, ಸಾಗಿ, ಅಲ್ಪಮಟ್ಟಿನ ಯಶಸ್ಸು ಕಂಡು, ಇನ್ನೂ ಸಾಧಿಸಬೇಕೆನ್ನುವ ಉತ್ಸಾಹದ ಒಯಸ್ಸಿಸ್ಸನ್ನಿರಿಸಿಕೊಂಡಿರುವ "ಮಧ್ಯಮ ವರ್ಗದ ಯುವ ಚೇತನಗಳ ಕನಸಿನ ಕೂಸು". ಇಲ್ಲಿರುವುದು ಅಮಿತ ಉತ್ಸಾಹ, ಅಸಾಧಾರಣ ಜ್ಞಾನ ಸಂಪತ್ತು, ಬದುಕು ಸವೆಸಲು ಕಷ್ಟವಾದ ಮಂದಿಗೆ ಒಂದಸ್ಟು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ. ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಂಗತ್ಯ.
"ಚುಕ್ಕಿ ಸಂಸ್ಥೆ " , ಸುಂದರ ಬದುಕು ಕಟ್ಟಿ ಕೊಳ್ಳಲು ನಿಜವಾದ ಗೆಳೆಯ.
"ಗ್ರಾಮೀಣಾಬಿವ್ರುದ್ದಿ ಮೂಲಕ ಸದೃಢ ಭಾರತದ ನಿರ್ಮಾಣ "
Sunday, October 26, 2008
ಮೊದಲ ಮಾತು ...
Tuesday, October 21, 2008
ಬೆಳಗಿಸೋಣ ಚುಕ್ಕಿಯ.....
"ಗ್ರಾಮೀಣಾ ಭಿವ್ರುದ್ದಿ ಯ ಮೂಲಕ ನವ ಭಾರತ ನಿರ್ಮಾಣ" da ಕನಸು ಹೊತ್ತುಕೊಂಡು ಹುಟ್ಟಿ ಕೊಂಡಿರೋ ಸಮಾನ ಮನಸ್ಕ ಯುವ ಮನಸ್ಸುಗಳ ಸಮಾಜಮುಖಿ ಸೇವಾ ಸಂಸ್ಥೆ "ಚುಕ್ಕಿ". ಅದಮ್ಯ ಕನಸುಗಾರ ಲಿಂಗೆಶ್ ಹುಣಸೂರ್ ಈ ಸಂಸ್ಥೆಯ ಸಂಸ್ಥಾಪಕರು. "ಸೇವೆ, ಶಿಕ್ಷಣ, ಜಾಗೃತಿ, ಅಭಿವೃದ್ದಿ " ಈ ಸಂಸ್ಥೆಯ ಮೂಲ ಮಂತ್ರಗಳು.
Saturday, May 3, 2008
ಕಾರ್ಯಾಲಯ ವಿಳಾಸ...Official Address
ಚುಕ್ಕಿ ಸಂಸ್ಥೆ.
(REG NO:MYS - S 47- 2008/09)
# 24 41 , ಗೋಕುಲ ಬಡಾವಣೆ,
ಹುಣಸೂರು , ಮೈಸೂರು ಜಿಲ್ಲೆ,
ಕರ್ನಾಟಕ - 571 105 .
ದೂರವಾಣಿ : Telephone No:
9341410413
9964438393
ಈ ಅಂಚೆ: E-MAIL
chukkisamsthe@gmail.com
ಅಂತರ್ಜಾಲ ತಾಣ: Web Address
http://chukkisamsthe.blogspot.com
OUR MAIN OFFICE
CHUKKI SAMSTHE(r)
#2441,Gokula Extn.,
Hunsur Town, Mysore dist.,
Karnataka - 571105
ಕಾರ್ಯಕಾರಿ ಸಮಿತಿ...
1 . ಗೌರವಾದ್ಯಕ್ಷರು ------ ಪ್ರೊ. ಮೋಹನ್ ಶರ್ಮ (MA.B.Ed)
ದೂ : 9341149049
2. ಅದ್ಯಕ್ಷರು -------- ನಂದೀಶ್ ಕೆ. ಸಿ. (BSc , B.Ed)
ದೂ : 996468523033
3. ಉಪಾದ್ಯಕ್ಷರು ------ ಲಕ್ಷ್ಮಿಕಾಂತ್ (MA,Tch,BEd)
ದೂ : 9480057205
4. ಪ್ರಧಾನ ಕಾರ್ಯದರ್ಶಿ---- ಯೋಗಿಶ್ ಪ್ರಭು (MA. , MBA )
ದೂ : 99004510765
5. ಸಹ ಕಾರ್ಯದರ್ಶಿ----- ಸಿ . ಎನ್. ಗೋಪಾಲ್ ಗೌಡ್ರು (MA,M.Phil,B.Ed)
ದೂ : 9945374949
6. ಸಂಘಟನ ಕಾರ್ಯದರ್ಶಿ ----- ಮಧುಸೂಧನ್ ಎಸ್ .ಕೆ. (MA)
ದೂ : 998602807
7. ಖಜಾಂಚಿ ------- ರವಿಪ್ರಸಾದ್ ಕೆ. (M.Sc., M.Ed.,)
ದೂ : 9844775616
ಸದಸ್ಯತ್ವ.....
- ಈ ಸಂಸ್ಥೆಯ ಸದಸ್ಯರಾಗಬಯಸುವವರು 18 ವರ್ಷಕ್ಕೆ ಮೆಲಿನವರಾಗಿರಬೇಕು.
- ಸಂಸ್ಥೆಯ ಉದ್ದೇಶಗಳನ್ನು ಗೌರವಿಸುವನ್ತವರಾಗಿರಬೇಕು.
- ಸ್ವಯಂ ವಿವರಗಳನ್ನೋಳಗೊಂಡ ಅರ್ಜಿಯನ್ನು ಬರ್ತಿ ಮಾಡಿ , 2 ಭಾವಚಿತ್ರಗಲೋಟ್ಟಿಗೆ,ಗೊತ್ತು ಮಾಡಿದ ಫಿ(ಶುಲ್ಕ) ವನ್ನು ಪಾವತಿ ಮಾಡಿ ಸಂಸ್ಥೆಯ ಸದಸ್ಯತ್ವ ವನ್ನು ಪಡೆದುಕೊಳ್ಳುವುದು.
- ಈ ಸಂಸ್ಥೆಯ ಸದ್ಸ್ಯರಾಗುವವರು , ಜಾತ್ಯಾತೀತ ,ಪಕ್ಷಾತೀತ , ನಿಲುವನ್ನಿಟ್ಟುಕೊಂಡಿದ್ದು , ಸಾಮಾಜಿಕ ಕಳಕಳಿ ಹೊಂದಿರಬೇಕು.
- ಪ್ರಾರಮ್ಬಿಕ ಸದಸ್ಯತ್ವ ಶುಲ್ಕ ರೂ 1,000 (ಒಂದು ಸಾವಿರ ರೂಪಾಯಿಗಳು).
- ಪ್ರತಿ ಮಾಹೆ , ಆದಾಯದ ಶೇ 1 (ಒಂದು) ರಸ್ತು ಹಣವನ್ನ ಸಂಸ್ಥೆಗೆ ನೀಡುವುದು.
- ಸಂಸ್ಥೆಯ ವತಿಯಿಂದ ಸದಸ್ಯರಿಗೆ "ಗುರುತಿನ ಪತ್ರ" ನೀಡಲಾಗುವುದು.
- ಸದಸ್ಯರ ಹಿತ, ಯೋಗಕ್ಷೇಮವನ್ನು ಸಂಸ್ಥೆಯು ನೋಡಿಕೊಳ್ಳುವುದು.
Wednesday, April 30, 2008
ಚುಕ್ಕಿ...ಬದುಕು ಬೆಳಕಾಗಿಸುವ ಕಲ್ಪವಲ್ಲಿ....
" ಚುಕ್ಕಿ ಸಂಸ್ಥೆ "ಗೆ , ಪ್ರತಿ ದಿನ, ಪ್ರತಿ ಕ್ಷಣ ಹೊಸ ಹೊಸ ಚುಕ್ಕಿಗಳು ಸೇರ್ಪಡೆಯಾಗುತ್ತಿದ್ದಾರೆ....ಇದು ಸಂತೋಷದ ವಿಷಯ....ಸಮಾಜದಲ್ಲಿ ಆರೋಗ್ಯಕರ ಬದಲಾವನೆಯನ್ನ, ಸುದಾರಣೆಯನ್ನ ತರಲು ಹೊರಟಿರುವ ನಮ್ಮ ತೋಳುಗಳಿಗೆ ನಿಮ್ಮ ಸೇರ್ಪಡೆ ನೂರ ಆನೆಯ ಬಲವನ್ನ ತಂದಂತಾಗಿದೆ....ನಿಮ್ಮ ಸಮಾಜಮುಕಿ ನಿಲುವಿಗೆ, ಸೇವಾ ಮನಸ್ಸಿಗೆ ನಮ್ಮ ಕೋಟಿ ಕೋಟಿ ಅನಂತ ನಮನಗಳು ಹಾಗು ಧನ್ಯವಾದಗಳು.
ಸಾಮಾಜಿಕವಾಗಿ ಹಾಗು ಸಾಂಸ್ಕೃತಿಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಲು, ಸಾಂಘಿಕ ಶಕ್ತಿಯಲ್ಲಿ ನಂಬಿಕೆ ಇರಿಸಿದ ಯುವ ಸಮಾನ ಮನಸ್ಸುಗಳು " ಕರ್ನಾಟಕ ಸಂಘ - ಸಂಸ್ಥೆ ಗಳ ಕಾಯಿದೆ , ೧೯೬೦ ರ ರೀತ್ಯಾ " ಚುಕ್ಕಿ ಸಂಸ್ಥೆ" ಯನ್ನು ರಚಿಸಲಾಗಿದೆ...ಹಾಗು...ಇದನ್ನು " ಜಿಲ್ಲಾ ನೋಂದಣಿ ಅಧಿಕಾರಿಗಳು, ಸಂಘ -ಸಂಸ್ಥೆ ಗಳ ನೋಂದಣಿ ಇಲಾಕೆ,ಮೈಸೂರು ಜಿಲ್ಲೆ, ಮೈಸೂರು" ಇಲ್ಲಿ ನೊಂದಾಯಿಸಲಾಗಿದೆ....REG NO: MYS - S 47 - 2008/09.
ಪ್ರಾರಂಭಿಕ ಹಂತದಲ್ಲಿ ಈ ಸಂಸ್ಥೆಯ ಕಾರ್ಯ ವ್ಯಾಪ್ತಿ ಮೈಸೂರು ನಗರ ಹಾಗು ಜಿಲ್ಲೆ ಯನ್ನು , ಒಳಗೊಂಡಿದ್ದು ನಂತರದ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ಥರಿಸಲಾಗುವುದು....ಆದರೆ ನಮ್ಮ ಸೇವಾ ಮನಸ್ಸುಗಳಿಗೆ ಯಾವುದೇ ಗಡಿಯ ಹಂಗಿಲ್ಲ....ರಾಜ್ಯದ ಎಲ್ಲ ಭಾಗಳಲ್ಲಿ ಈ ಸಂಸ್ಥೆಯ ಸದಸ್ಯರಿರುವುದು, ಸಂಸ್ಥೆಯ ಹೆಮ್ಮೆ.
ಪ್ರೀತಿಯ ಬಂಧುಗಳೇ, ಮತ್ತೊಮ್ಮೆ ಸಂಸ್ಥೆಗೆ ಹೃದಯಪೂರ್ವಕ ಸ್ವಾಗತ ಕೋರುತ್ತ, ತಮ್ಮನ್ನ ಅಭಿನಂದಿಸುತ್ತೇನೆ.....ಅಂತರ್ಜಾಲದಲ್ಲಿ , ನಿಮ್ಮ ಸುತ್ತ ಮುತ್ತಲಿನಲ್ಲಿ ಸೇವಾ ಮನಸ್ಸು ಹೊಂದಿರುವ ನಿಮ್ಮ ಆತ್ಮಿಯರಿಗೆ ಸಂಸ್ಥೆಯ ಬಗ್ಗೆ ತಿಳಿಸಿ...ಎಲ್ಲ ಚುಕ್ಕಿಗಳು ಒಟ್ಟಿಗೆ ಸೇರಿದರೆ , ಜಗತ್ತಿಗೆ ಬೆಳಕು ನೀದಬಹುದಲ್ವಾ....ಸಾಂಘಿಕ ಶಕ್ತಿ ಸದಾ ಜೀವಂತವಾಗಿರಲಿ.....
ಪ್ರೀತಿಯಿಂದ...
ಚುಕ್ಕಿ...
ಬಿಂದುವಿನಿಂದ ಅನಂತ ದೆಡೆಗೆ ................
HELLO: 9964438393
E-MAIL: lingeshkc9@gmail.com
Address: LINGESH K C
POSTAL ASST.,
DEVANAHALLI POST OFFICE,
BANGALORE(R) DIST,
KARNATAKA - 562 110
*************** ಶುಭ ಮಸ್ತು ********************
Sunday, April 27, 2008
ವಿವೇಕ ವಾಣಿ...
" ಐಶ್ವರ್ಯ ಹೀನರಾದ, ನಿರ್ಭಗ್ಯರಾದ, ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ, ಕಾದಡಿ ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಯೇಳುವರೆಂದು ನಾನು ನಂಬುತ್ತೇನೆ..ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆಯಲ್ಲವನ್ನು ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ ಪದುವರೋ , ಆಗ ಮಾತ್ರ ಭಾರತ ಕಂಡ ಮೇಲೆ ಏಳುವುದು"
------------------------------------ಸ್ವಾಮಿ ವಿವೇಕಾನಂದರು------------------------------