Monday, March 10, 2008

ಬೆಳೆವ ಕಂದನ ತೊದಲ ನುಡಿ..........

ಇದು ಯಾವ ಸಂಸ್ಥೆ..........?!!!!!!!!!!!!!!!
ಇದು ಯಾರ ಸಂಸ್ಥೆ.................?!!!!!!!!!!!!!!!!!

ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ...........ಈ ಉತ್ತುಮ ಕೊಡುಗೆ ಎಂದೆರೆ....." ನಿಸ್ವಾರ್ಥ ಸೇವೆ".. ನಿಸ್ವಾರ್ಥ ಸೇವೆಯ ಮೂಲಕ ಗ್ರಾಮೀನಾಭಿವ್ರುದ್ದಿ, ಆ ಮೂಲಕ ಭಾರತದ ಅಭಿವೃದ್ದಿ. ಅದರೊತ್ತಿಗೆ ಸಮಾಜದ ಸರ್ವತೋಮುಕ ಅಬಿವ್ರುದ್ದಿ ನಮ್ಮ ಧ್ಯೇಯ..
ಇದು ಶ್ರೀಮಂತರ, samaya saadakara , ಮತೀಯ ವಾದಿಗಳ, ಸ್ವಾರ್ಥ ಸಾದಕರ ಸಂಸ್ಥೆಯಲ್ಲ...ಬದಲಾಗಿ ಬದುಕಿನ kasta galannu edurisi , ಸಾದನೆಯ ಕನಸು ಹೊತ್ತು, ಸಾಗಿ, ಅಲ್ಪಮತ್ತಿನ ಯಶಸ್ಸು ಕಂಡು, ಇನ್ನೂ ಸಾದಿಸಬೇಕೆನೂವ ಉಸ್ತ್ಸಾಹದ ಒಯಸಿಸ್ಸನ್ನು ಇರಿಸಿಕೊಂಡಿರುವ ಮದ್ಯಮ ವರ್ಗದ ಹುಡುಗರ ಕನಸಿನ ಕೂಸು. ಇಲ್ಲಿರುವುದು ಅಮಿತ ಉತ್ಸಾಹ,. ಅಸಾಧಾರಣ ಜ್ಞಾನ ಸಂಪತ್ತು, ಬದುಕಿನಲ್ಲಿ ನವ ಚೈತನ್ಯ ತುಂಬಬಲ್ಲ ಆತ್ಮೀಯ ಮಾತು...ದಾರಿ ಕಾಣದೆ ಕಂಗಾಲಾದ, ಬದುಕು ಸವೆಸಲು ಕಸ್ತವಾದ ಮಂದಿಗೆ ಒಂದಸ್ತು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ...........ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಗತ್ಯ........

"ನಿಸ್ವಾರ್ಥ ಮನಸ್ಸು" ಗಳೇ ಈ ಸಂಸ್ಥೆಯ ಬಂಡವಾಳ.........."ನಿಸ್ವಾರ್ಥ ಸೇವೆ" ನಮ್ಮ ದಾರಿ......"ಅಭಿವೃದ್ದಿ" ನಮ್ಮ ಕನಸು.......ಆಂತರಿಕ ಹಾಗು ಬಹಿರಂಗ ಸಾಧನೆಗೆ ನಮ್ಮ ಮಟ್ಟಿನ ನೆರವು.........ಮುಂದುವರಿಯುತ್ತಿರುವ ಹಳ್ಳಿಗಳ ಮೂಲಕ ನವ ಭಾರತವನ್ನು ಕಟ್ಟುವ ಹಂಬಲ.........ಪ್ರಚಾರ ನಮಗೆ ಅಗತ್ಯವಿಲ್ಲ........ಲಾಬದ ಮಾತಂತೂ ಇಲ್ಲವೇ ಇಲ್ಲ.......ಇಲ್ಲಿರುವುದು ಸಮಾಜ ಮುಖಿಯಾದ , ಅಭಿವೃದ್ದಿ ಪಟದ ದಾರಿ, ಸಮಾಜದ ಸರ್ವಾನ್ಗೀನ ಅಬಿವ್ರುದ್ದಿ............ನಾವು ಸಾಧಿಸಿಯೇ ತೀರುತ್ತೆವೆನ್ನುವ, ಅದಕ್ಕಾಗಿ ನಮ್ಮ ಅಳಿಲು ಸೇವೆ ಗೈಉತ್ತೆನ್ನುವ ನಂಬಿಕೆ ಹೊತ್ತ ಯುವ ಸೈನಿಕರ ಸೈನ್ಯ ಚುಕ್ಕಿ ಸಂಸ್ಥೆ......ನೊಂದವರಿಂದ, ನೊಂದವರ, ನೊಂದವರಿಗಾಗಿ ಇರುವ ಸಂಸ್ಥೆ,,,,,,,,,,,ಕನಸುಗಳನ್ನು ಹುಟ್ಟಿಸುವ ತಾಣ...............ನನಸು ಮಾಡುವ ಜೀವನ ಯಾನ.......
ಒಟ್ಟಿನಲ್ಲಿ ಚುಕ್ಕಿ ಸುಂದರ ಬದುಕು ಕಟ್ಟಿವಲ್ಲಿ ನಿಜವಾದ ಗೆಳೆಯ........

Friday, March 7, 2008

ಗುರಿ - ಉದ್ದೇಶ -ಕನಸು

*********ಸಂಸ್ಥೆಯ ಕನಸುಗಳು*******


ಪ್ರಪಂಚವನ್ನ ಬದಲಿಸಲು,ಸುದಾರನೆಯನ್ನ ತರಲು ಇರುವ ಪ್ರಮುಖ ಅಸ್ತ್ರ ಅಂದರೆ, ಅದು "ಶಿಕ್ಷಣ " , ಮಾತ್ರ........ಅದರಿಂದ ಎಂತಹುದೇ ಆದ ಪವಾಡವನ್ನ ಸ್ರುಸ್ತಿಸಬಹುದು........ನಾವೆಲ್ಲ ಓದಿಕೊಂಡಿರೋ ಯುವಕರು.........ಹಾಗಾಗಿ........ಸುದಾರಣೆಗೆ ನಾವು ಬಳಸೋ ಅಸ್ತ್ರ........." ಶೈಕ್ಷಣಿಕ ಜಾಗೃತಿ , ಅದರ ಮೂಲಕ ಬದುಕಿನ ಅಂತರಂಗ ,ಬಹಿರಂಗ ವಿಕಸನ "..ಶಿಕ್ಷಣ, ಜಾಗೃತಿ, ವಿಕಸನ ".. ಈ ಸಂಸ್ಥೆಯ ಮೂಲ ಮಂತ್ರಗಳು.....
************ಸಂಸ್ಥೆಯ ಗುರಿಗಳು ***********

೦೧. ಶೈಕ್ಷಣಿಕ ಜಾಗೃತಿ ಮೂಲಕ ಗ್ರಾಮೀನಾಬಿವ್ರುದ್ದಿ.

೦೨. ಯುವಕರಲ್ಲಿ ಪರಿಸರ ಪ್ರಜ್ಞೆ, ಸಾಂಸ್ಕೃತಿಕ ಹಾಗು ಸಾಹಿತ್ಯದ ಅರಿವು muudisuvudu.

೦೩. ಸ್ವಾವಲಂಬಿ ಬದುಕಿನ ನಿರ್ಮಾಣ.

************ಸಂಸ್ಥೆಯ ಉದ್ದೇಶಗಳು*************

೦೧. ಸಂಸ್ಥೆಯ ವತಿಯಿಂದ ಕಾರ್ಯಕ್ಷೇತ್ರದಲ್ಲಿ ಹಿಂದುಳಿದ ಗ್ರಾಮದ ಪ್ರಾಥಮಿಕ/ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿ, ಆ ಶಾಲೆಯ ಸರ್ವಾನ್ಗೀನ ಅಭಿವೃದ್ದಿಗೆ ಶ್ರಮಿಸುವುದು.

೦೨. ಶಾಲೆಯಲ್ಲಿ ಓದುತ್ತಿರುವ ಹಿಂದುಳಿದ ಬಡ ಮಕ್ಕಳ ವಿಧ್ಯಭ್ಯಾಸಕ್ಕೆ ಸಹಾಯ,ಸಲಹೆ.

೦೩. ಶಾಲೆಯ ಸಹಯೋಗದಲ್ಲಿ ಗ್ರಾಮದಲ್ಲಿ swacchateya ಅರಿವು ಹಾಗೂ ಪರಿಸರ ಸಂರಕ್ಷಣೆ , ಜಾಗೃತಿ ಅದಾರಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೦೪. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ವಿವಿಧ ಸಾಂಸ್ಕೃತಿಕ ,ಶೈಕ್ಷಣಿಕ ಸ್ಪರ್ದೆಗಳು ಹಾಗೂ ಶಿಬಿರಗಳನ್ನು ನಡೆಸುವುದು.

೦೫. ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗು ಮಾರ್ಗದರ್ಶನ.

೦೬. ಇನ್ನಿತರ ಸಂಘ - ಸಂಸ್ಥೆ ಗಳ ಸಹಯೋಗದೊತ್ತಿಗೆ ಗ್ರಾಮಗಳಲ್ಲಿ ಆಗಾಗ್ಗೆ ವಿಸೇಶ ಕಾನೂನು ಶಿಬಿರ, ಆರೋಗ್ಯತಪಾಸಣೆ ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

೦೭. ಸಂಸ್ಥೆಯ ವತಿಯಿಂದ ಕಾರ್ಯಕ್ಷೇತ್ರದಲ್ಲಿ ಸಾಮಾಜಿಕ
ಕಾಳಜಿಗಾಗಿ ದುಡಿದ ಮಹಾನ್ ಚೇತನಗಳನ್ನೂ ಗುರುತಿಸಿ ,ಗೌರವಿಸುವುದು.

೦೮. ಶಾಲೆಗೆ ಅಗತ್ಯವಿರುವ ಶೈಕ್ಷಣಿಕ ಹಾಗು ಅಗತ್ಯ ಸಾಮಗ್ರಿಗಳ ಪೂರೈಕೆ.

೦೯. ಯುವ ಜನರು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಅವರಿಗಿರುವ ಅವಕಾಶಗಳ ಕುರಿತು , ಬಲ್ಲವರಿಂದ ಉಪನ್ಯಾಸ, ಸಹಾಯ ಹಸ್ತ.

೧೦. ಮಕ್ಕಳಲ್ಲಿ , ಯುವಕರಲ್ಲಿ ಓದುವ ಹವ್ಯಾಸವನ್ನು ವ್ರುದ್ದಿಸುವುದು. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಲೆಕನಗಳ, ಕೃತಿಗಳ ಪ್ರಕಟಣೆ..........

ಹೀಗೆ..........ಹತ್ತು ಹಲವು ಕನಸುಗಳು ನಮ್ಮವು.........ಹಲವರ ಕನಸುಗಳನ್ನ ನನಸು ಮಾಡುವುದೇ ನಮ್ಮ ಅತಿ ದೊಡ್ಡ ಕನಸು.........ನಿಮ್ಮೆಲ್ಲರ ಸಹಕಾರ,ಸಲಹೆ, ಆಶಿರ್ವಾದವಿರಲಿ.........


ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......